ADVERTISEMENT

ಐಟಿಸಿ ಅಕಾಡೆಮಿ– ಆರ್‌ಸಿಯು ಒಡಂಬಡಿಕೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 12:33 IST
Last Updated 16 ಮಾರ್ಚ್ 2020, 12:33 IST
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ತಮಿಳುನಾಡಿನ ಐ.ಸಿ.ಟಿ. ಅಕಾಡೆಮಿ ನಡುವೆ ಅಧಿಕಾರಿಗಳು ಒಡಂಬಡಿಕೆ ಮಾಡಿಕೊಂಡರು
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ತಮಿಳುನಾಡಿನ ಐ.ಸಿ.ಟಿ. ಅಕಾಡೆಮಿ ನಡುವೆ ಅಧಿಕಾರಿಗಳು ಒಡಂಬಡಿಕೆ ಮಾಡಿಕೊಂಡರು   

ಬೆಳಗಾವಿ: ತಮಿಳುನಾಡಿನ ಐ.ಸಿ.ಟಿ. ಅಕಾಡೆಮಿಯೊಂದಿಗೆ ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಒಡಂಬಡಿಕೆ ಮಾಡಿಕೊಂಡಿದೆ.

ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿ, ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತಾ ಮನೋಭಾವ ಬೆಳೆಸುವುದು, ಯುವಜನ ಸಬಲೀಕರಣ, ಔದ್ಯೋಗಿಕ ಮತ್ತು ಸಾಂಸ್ಥಿಕ ಸಮನ್ವಯ, ಇ-ತಂತ್ರಜ್ಞಾನದ ಸಬಲೀಕರಣ, ಸಂಶೋಧನೆ ಮತ್ತು ಪ್ರಕಟಣೆ ವಿಷಯಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸುವುದು ಒಡಂಬಡಿಕೆಯ ಉದ್ದೇಶವಾಗಿದೆ.

ಸೋಮವಾರ ನಡೆದ ಸಭೆಯಲ್ಲಿ ಪ್ರಕ್ರಿಯೆ ನಡೆಯಿತು. ಐಸಿಟಿ ಅಕಾಡೆಮಿಯ ಡಿ.ವಿಷ್ಣುಪ್ರಸಾದ್, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಹಾಗೂ ಕುಲಸಚಿವ ಪ್ರೊ.ಬಸವರಾಜ ಪದ್ಮಶಾಲಿ ಕಾಗದಪತ್ರಗಳನ್ನು ಹಸ್ತಾಂತರಿಸಿದರು.

ADVERTISEMENT

ಐಕ್ಯೂಎಸಿ ನಿರ್ದೇಶಕ ಪ್ರೊ.ಶಿವಾನಂದ ಗೊರನಾಳೆ ಹಾಗೂ ಡೀನ್‌ ಪ್ರೊ.ಎಸ್.ಎಂ. ಗಂಗಾಧರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.