ADVERTISEMENT

ಮೂಡಲಗಿ: ಇತಿಹಾಸ, ಸಂಸ್ಕತಿ ಅರಿಯಲು ಸಲಹೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 3:05 IST
Last Updated 20 ಜುಲೈ 2025, 3:05 IST
ಮೂಡಲಗಿ ಶಿಕ್ಷಣ ಸಂಸ್ಥೆಯ ಶಿವಬೋಧರಂಗ ಪದವಿ ಪೂರ್ವ ಮಹಾವಿದ್ಯಾಲಯದ 2025–26ನೇ ಸಾಲಿನ ವಿದ್ಯಾರ್ಥಿ ಒಕ್ಕೂಟ, ಎನ್‌ಎಸ್‌ಎಸ್‌, ರೆಡ್‌ಕ್ರಾಸ್‌, ಕ್ರೀಡೆ ಮತ್ತು  ಸಾಂಸ್ಕೃತಿ ಚಟುವಟಿಕೆಗಳ ಉದ್ಘಾಟನೆಯನ್ನು ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಅತಿಥಿ ನಂದು ಗಾಯಕವಾಡ ನೆರವೇರಿಸಿದರು
ಮೂಡಲಗಿ ಶಿಕ್ಷಣ ಸಂಸ್ಥೆಯ ಶಿವಬೋಧರಂಗ ಪದವಿ ಪೂರ್ವ ಮಹಾವಿದ್ಯಾಲಯದ 2025–26ನೇ ಸಾಲಿನ ವಿದ್ಯಾರ್ಥಿ ಒಕ್ಕೂಟ, ಎನ್‌ಎಸ್‌ಎಸ್‌, ರೆಡ್‌ಕ್ರಾಸ್‌, ಕ್ರೀಡೆ ಮತ್ತು  ಸಾಂಸ್ಕೃತಿ ಚಟುವಟಿಕೆಗಳ ಉದ್ಘಾಟನೆಯನ್ನು ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಅತಿಥಿ ನಂದು ಗಾಯಕವಾಡ ನೆರವೇರಿಸಿದರು   

ಮೂಡಲಗಿ: ‘ವೈವಿಧ್ಯತೆಯಿಂದ ಕೂಡಿರುವ ಭಾರತದ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಂಡರೆ ದೇಶಾಭಿಮಾನವು ತಾನಾಗಿಯೇ ಉಕ್ಕುತ್ತದೆ’ ಎಂದು ಬನಹಟ್ಟಿಯ ನಾಡು, ನುಡಿ ಚಿಂತಕ ನಂದು ಗಾಯಕವಾಡ ಹೇಳಿದರು.

ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಶಿವಬೋಧರಂಗ ಪದವಿ ಪೂರ್ವ ಮಹಾವಿದ್ಯಾಲಯದ 2025–26ನೇ ಸಾಲಿನ ವಿದ್ಯಾರ್ಥಿ ಒಕ್ಕೂಟ, ಎನ್‌ಎಸ್‌ಎಸ್‌, ರೆಡ್‌ಕ್ರಾಸ್‌, ಕ್ರೀಡೆ ಮತ್ತು ಸಾಂಸ್ಕೃತಿ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕಲಿಕೆಯೊಂದಿಗೆ ದೈಹಿಕ ಮತ್ತು ಮಾನಸಿಕ ಸದೃಢತೆಯೊಂದಿಗೆ ದೇಶ ಕಟ್ಟುವ ಕಾರ್ಯವನ್ನು ಮಾಡಬೇಕು ಎಂದರು.

ಬದುಕು ಕೊಟ್ಟ ತಂದೆ, ತಾಯಿ, ಅನ್ನ ನೀಡಿದ ರೈತ, ದೇಶ ಕಾಯುವ ಸೈನಿಕರು ನಿಜವಾದ ಹೀರೋಗಳಾಗಿದ್ದು ಅವರ ಋಣ ಅಪಾರವಾಗಿದೆ. ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳ ಪರೀದಿಯಲ್ಲಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.

ADVERTISEMENT

ಅತಿಥಿಯಾಗಿದ್ದ ಖಾನಟ್ಟಿಯ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಆರ್.ಎಸ್. ಹುನ್ನೂರ, ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಪಿ. ಕುಲಕರ್ಣಿ ಮಾತನಾಡಿ ವಿದ್ಯಾರ್ಥಿಗಳು ಕಲಿಕೆಯ ಅವಧಿಯನ್ನು ಸದುಪಯೋಗ ಮಾಡಿಕೊಂಡು ಜ್ಞಾನ ಸಂಪಾದಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆವಹಿಸಿದ್ದ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಂಡು ತಂದೆ, ತಾಯಿ ವಿದ್ಯೆ ಪಡೆದ ಸಂಸ್ಥೆಯ ಗೌರವವನ್ನು ಹೆಚ್ಚಿಸಬೇಕು ಎಂದರು.

ಪ್ರಾಚಾರ್ಯ ಎಂ.ಎಸ್. ಪಾಟೀಲ, ನಿವೃತ್ತ ಪ್ರಾಚಾರ್ಯ ಎಸ್.ಡಿ. ತಳವಾರ, ಉಪನ್ಯಾಸಕರಾದ ಎಸ್.ಕೆ. ಹಿರೇಮಠ, ಬಿ.ಜಿ. ಗಡಾದ, ಎಲ್.ಆರ್. ಧರ್ಮಟ್ಟಿ, ಎಚ್.ಎಂ. ಹತ್ತರಕಿ, ಆರ್.ಎಸ್. ಹಾದಿಮನಿ, ಎಚ್.ಡಿ. ಚಂದರಗಿ, ಎಸ್.ಪಿ. ಸಣ್ಣಮೇತ್ರಿ, ವಿಷ್ಣು ಬಡಿಗೇರ, ಎಂ.ಜಿ. ಹೆಬ್ಬಳ್ಳಿ, ಎಸ್.ಕೆ. ಮಠದ, ರೇಖಾ ಪಿ. ಬಿರಾದಾರ ಇದ್ದರು.

ಬಿ.ಜಿ. ಗಡಾದ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.