ADVERTISEMENT

ಮೂಡಲಗಿ: ವಾರ್ಷಿಕ ಸ್ನೇಹ ಸಮ್ಮೇಳನ ಇಂದು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 2:19 IST
Last Updated 28 ಡಿಸೆಂಬರ್ 2025, 2:19 IST
<div class="paragraphs"><p>ಪ್ರಾತಿನಿಧಿಕ ಪತ್ರ</p></div>

ಪ್ರಾತಿನಿಧಿಕ ಪತ್ರ

   

ಮೂಡಲಗಿ: ತಾಲ್ಲೂಕಿನ ರಾಜಾಪುರ ಗ್ರಾಮದ ವಿವೇಕಾನಂದ ಶಿಕ್ಷಣ ಸಂಸ್ಥೆಯ ಬಿ.ಎಲ್.ಕಮತಿ ಇಂಗ್ಲಿಷ್‌ ಮಾಧ್ಯಮ ಪ್ರಾಥಮಿಕ ಶಾಲೆ ಮತ್ತು ಬಸವಂತಣ್ಣಾ ಕಮತಿ ಕಲಾ ಹಾಗೂ ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ‘ಅವಿಷ್ಕಾರ’ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಡಿ.28ರಂದು ಜರುಗಲಿದೆ.

ಸಮಾರಂಭದ ಸಾನ್ನಿಧ್ಯವನ್ನು ಅಂಕಲಗಿ-ಕುಂದರಗಿ ಮಠದ ಅಮರಸಿದ್ಧೇಶ್ವರ ಸ್ವಾಮೀಜಿ ವಹಿಸುವರು, ಸಂಸ್ಥೆಯ ಅಧ್ಯಕ್ಷೆ ಕಸ್ತೂರಿ ಬಸವಂತ ಕಮತಿ ವಹಿಸುವರು, ಉದ್ಘಾಟಕರಾಗಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ ಶಿಂಧೆ, ಎಸ್.ಸಿ.ಇ ಸೊಸೈಟಿ ಅಧ್ಯಕ್ಷ ರಾಮಚಂದ್ರ ಪಾಟೀಲ, ಮುಖ್ಯ ಅತಿಥಿಗಳಾಗಿ ಚಿಕ್ಕೋಡಿ ಡಿಡಿಪಿಯು ಪಾಂಡುರಂಗ ಭಂಡಾರೆ, ಮೂಡಲಗಿ ಬಿಇಒ ಪ್ರಕಾಶ ಹಿರೇಮಠ, ಸಿಆರ್‌ಪಿ ವಿಠ್ಠಲ ಬುದ್ನಿ, ಜಿಎಚ್‌ಎಸ್ ಪ್ರಾಚಾರ್ಯ ಎಲ್.ಡಿ. ಕೊಕಟನೂರ ಅತಿಥಿಗಳಾಗಿ ಭಾಗವಹಿಸುವರು ಎಂದು ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಕಮತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.