ADVERTISEMENT

ಮುನವಳ್ಳಿ: ತಾಲ್ಲೂಕು ಕೇಂದ್ರ ಮಾಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 8:56 IST
Last Updated 17 ಡಿಸೆಂಬರ್ 2025, 8:56 IST
ಸಭೆಯನ್ನು ಉದ್ದೇಸಿಸಿ ಮಾತನಾಡಿದ ಶ್ರೀ ಮುರುಘೇಂದ್ರ ಶ್ರೀಗಳ 
ಸಭೆಯನ್ನು ಉದ್ದೇಸಿಸಿ ಮಾತನಾಡಿದ ಶ್ರೀ ಮುರುಘೇಂದ್ರ ಶ್ರೀಗಳ    

ಮುನವಳ್ಳಿ: ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡುವ ಕುರಿತು ಪೂರ್ವಭಾವಿ ಸಭೆ ಸೋಮಶೇಖರ ಮಠದ ಸಭಾ ಭವನದಲ್ಲಿ ಪಟ್ಟಣದ ಸೋಮಶೇಖರ ಮಠದ ಮುರುಘೇಂದ್ರ ಶ್ರೀಗಳ ಸಾನಿಧ್ಯದಲ್ಲಿ ಸೋಮವಾರ ಜರುಗಿತು.

ಮುರುಘೇಂದ್ರ ಶ್ರೀಗಳು ಮಾತನಾಡಿ, ಮುನವಳ್ಳಿ ಪಟ್ಟಣದ ದಿನೇ ದಿನೇ ಬೆಳವಣಿಗೆ ಆಗುತ್ತಿದೆ. ಸಂಘ ಸಂಸ್ಥೆಗಳು, ಬ್ಯಾಂಕಿಿಗಳು, ಕೋ ಆಫ್ ಸೊಸೈಟಿಗಳು, ಕೃಷಿ ಕೇಂದ್ರ, ರಾಷ್ಟ್ರೀಕೃತ ಬ್ಯಾಂಕ್‌ಗಳು, ಸಕ್ಕರೆ ಕಾರ್ಖಾನೆ, ಪುರಸಭೆ, ಶಾಲಾ ಕಾಲೇಜುಗಳು, ವಾರದ ಎರಡು ದಿನ ಸಂತೆ, ಹೀಗೆ ಹತ್ತು ಹಲವಾರು ವ್ಯವಹಾರಿಕವಾಗಿ, ಆರ್ಥಿಕವಾಗಿ, ಬೆಳೆಯುತ್ತಿದ್ದು ಪಟ್ಟಣಕ್ಕೆ ಸುತ್ತಮುತ್ತಲು 35 ಹಳ್ಳಿಗಳು ಸೇರುತ್ತವೆ. ಹೀಗೆ ತಾಲೂಕು ಕೇಂದ್ರವನ್ನಾಗಿ ಮಾಡಲು 20 ವರ್ಷಗಳಿಂದ ನಡೆಯುತ್ತಿರುವ ನಿರಂತರ ಪ್ರಯತ್ನ ನಡೆದಿದೆ ಎಂದರು.

ಶಿಕ್ಷಣ ಪ್ರೇಮಿ ಶಾಮನೂರ ಶಿವಶಂಕರಪ್ಪ ಅವರಿಗೆ ಮೌನಾಚರನೆ ಮುಖಾಂತರ ಶೃದ್ದಾಂಜಲಿ ಸಲ್ಲಿಸಲಾಯಿತು.

ADVERTISEMENT

ಪಂಚನಗೌಡ ದ್ಯಾಮನಗೌಡ್ರ, ಉಮೇಶ ಬಾಳಿ, ಅಂಬರೀಷ ಯಲಿಗಾರ, ವಕೀಲ ಮೋಹನ, ಕಲ್ಲಪ್ಪ ನಲವಡೆ, ಬಸಿರಅಹಮದ್‌ ಬೈರಕದಾರ, ಪುರಸಭೆ ಸದಸ್ಯ ಸುಭಾಸ ಗೀದಿಗೌಡ, ಪರುಶುರಾಮ ಗಂಟಿ, ಹೋರಾಟದ ರೂಪ ರೇಷಗಳ ಬಗ್ಗೆ ಮಾತನಾಡಿದರು.

ಐ.ಜಿ.ಚಂದರಗಿ, ಅರುಣಗೌಡ ಪಾಟೀಲ, ಎಮ್.ಆರ್.ಗೋಪಶೆಟ್ಟಿ, ಅರುಣ ಬಾಳಿ, ಎ.ಪಿ.ಎಮ್.ಸಿ ಅಧ್ಯಕ್ಷ ಚಂದ್ರು ಜಂಬ್ರಿ, ಪುರಸಭೆ ಸದಸ್ಯರು, ಪಟ್ಟಣದ ಪ್ರಮೂಖರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.