ರಾಮದುರ್ಗ: ಇಲ್ಲಿನ ನೇಕಾರ ಪೇಟೆಯ ರುದ್ರಭೂಮಿಯಲ್ಲಿ ಶಿವನ ಮೂರ್ತಿಯ ಮುಂಭಾಗದಲ್ಲಿ ನಿರ್ಮಿಸಿದ್ದ ನಂದಿ ಮತ್ತು ಹರಿಶ್ಚಂದ್ರ ಮೂರ್ತಿಗಳನ್ನು ವಿರೂಪಗೊಳಿಸಲಾಗಿದೆ.
ಶಿವನ ದೇವಾಲಯದ ಮುಂಭಾಗದಲ್ಲಿ ನಿರ್ಮಿಸಿದ ನಂದಿ ವಿಗ್ರಹದ ಕೊಂಬನ್ನು ಕಲ್ಲಿನಿಂದ ಒಡೆದು ಭಗ್ನಗೊಳಿಸಲಾಗಿದೆ. ಅಲ್ಲಿಯೇ ಇದ್ದ ಹರಿಶ್ಚಂದ್ರ ವಿಗ್ರಹವನ್ನು ಒಡೆದು ಹಾಕಲಾಗಿದೆ. ಇದರಿಂದಾಗಿ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಸಿಪಿಐ ಶಶಿಕಾಂತ ವರ್ಮಾ, ಶಾಸಕ ಮಹಾದೇವಪ್ಪ ಯಾದವಾಡ ಮತ್ತು ನೇಕಾರ ಸಮಾಜದ ಮುಖಂಡರು ಭೇಟಿ ನೀಡಿ ಪರಿಶೀಲಿಸಿದರು.
ನೇಕಾರ ಪೇಟೆಯ ಜನ ಶಾಂತಿ ಪ್ರಿಯರು. ಎಂದಿಗೂ ಕೋಮು ಭಾವನೆಗಳಿಗೆ ಒತ್ತು ನೀಡಿದವರಲ್ಲ. ಆದರೆ ಯಾರೋ ದುಷ್ಕರ್ಮಿಗಳು ವಿಗ್ರಹಗಳನ್ನು ವಿರೂಪಗೊಳಿಸಿ ಶಾಂತಿ ಕದಡಿದ್ದಾರೆ. ತಕ್ಷಣ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಅಧಿಕಾರಿಗಳಿಗೆ ಸೂಚಿಸಿದರು. ರಾಮದುರ್ಗದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.