ADVERTISEMENT

ಸವದತ್ತಿ: ಯಲ್ಲಮ್ಮ ದೇವಸ್ಥಾನದಲ್ಲಿ ತಾತ್ಕಾಲಿಕ ವ್ಯಾಪಾರಕ್ಕೆ ಅನುಮತಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 2:35 IST
Last Updated 18 ಸೆಪ್ಟೆಂಬರ್ 2025, 2:35 IST
17-ಸವದತ್ತಿ-01: ಯಲ್ಲಮ್ಮ ದೇವಸ್ಥಾನದಲ್ಲಿ ತಾತ್ಕಾಲಿಕ ವ್ಯಾಪಾರ ಕುರಿತು ಶಾಸಕ ವಿಶ್ವಾಸ್ ವೈದ್ಯ, ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು.
17-ಸವದತ್ತಿ-01: ಯಲ್ಲಮ್ಮ ದೇವಸ್ಥಾನದಲ್ಲಿ ತಾತ್ಕಾಲಿಕ ವ್ಯಾಪಾರ ಕುರಿತು ಶಾಸಕ ವಿಶ್ವಾಸ್ ವೈದ್ಯ, ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು.   

ಸವದತ್ತಿ: ನವರಾತ್ರಿ ಉತ್ಸವಕ್ಕಾಗಿ ತಾತ್ಕಾಲಿಕ ಅಂಗಡಿಗಳಿಗೆ ಅನುಮತಿ ನೀಡಿ ವ್ಯಾಪಾರಿಗಳ ಉಪಜೀವನಕ್ಕೆ ಅನುಕೂಲ ಕಲ್ಪಿಸಲು ಶಾಸಕ ವಿಶ್ವಾಸ್ ವೈದ್ಯ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಯಲ್ಲಮ್ಮ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿ ವ್ಯಾಪಾರಸ್ಥರ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ಯಲ್ಲಮ್ಮ ದೇವಿಯ ದರ್ಶನಕ್ಕೆಂದು ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸುತ್ತಾರೆ. ಸುಮಾರು ₹ 200 ಕೋಟಿಗೂ ಅಧಿಕ ಅನುದಾನದ ಕಾಮಗಾರಿ ಇಲ್ಲಿ ನಡೆಯಬೇಕಿದೆ. ಈ ಕುರಿತು ದೇವಸ್ಥಾನ ಸೇರಿ ಹಲವೆಡೆ ತಾತ್ಕಾಲಿಕ ಅಂಗಡಿಗಳ ತೆರವು ನಡೆದಿದೆ. ಇದರಿಂದ ವ್ಯಾಪಾರಸ್ಥರ ಸ್ಥಿತಿ ಅತಂತ್ರವಾಗಿ ಕೆಲ ತಿಂಗಳುಗಳಿಂದ ವ್ಯಾಪಾರವಿಲ್ಲದೇ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಜಾತ್ರಾ ಸಮಯವಾದದ್ದರಿಂದ ಗುಡ್ಡವನ್ನರಿಸಿ ಬದುಕು ಕಟ್ಟಿಕೊಂಡ ವ್ಯಾಪಾರಸ್ಥರಿಗೆ ಸದ್ಯ ಅಲ್ಪವಾದರೂ ಅನುಕೂಲ ಕಲ್ಪಿಸಲು ಕ್ರಮಕೈಗೊಳ್ಳಿ. ಜಾತ್ರೆ ಮುಕ್ತಾಯದ ನಂತರ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಲ್ಲಿ ತೆರವಿಗೆ ಸ್ವತಃ ವ್ಯಾಪಾರಿಗಳೇ ಸಹಕಾರ ನೀಡಲಿದ್ದಾರೆ ಎಂದರು.

ADVERTISEMENT

ದೇವಸ್ಥಾನದ ವ್ಯಾಪಾರಿಗಳಿಗಾಗಿ ಪ್ರತ್ಯೇಕ ವ್ಯಾಪಾರಿ ಸಂಕೀರ್ಣ ನಿರ್ಮಿಸುವ ಯೋಜನೆಯಿದ್ದು, ಶಾಶ್ವತ ಪರಿಹಾರ ಒದಗಿಸಲಾಗುವದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಮಾತನಾಡಿ, ‘ಶಾಸಕ ವಿಶ್ವಾಸ್ ವೈದ್ಯ ಅವರ ಮನವಿ ಮೇರೆಗೆ ವ್ಯಾಪಾರಸ್ಥರು ತಾತ್ಕಾಲಿಕ ಟೆಂಟ ಅಂಗಡಿಗಳನ್ನು ಸ್ಥಾಪಿಸಬಹುದು. ಹಾಕಿದ ತಾತ್ಕಾಲಿಕ ಅಂಗಡಿಗಳಿಂದ ಕಾನೂನು ಸುವ್ಯಸ್ಥೆಗೆ ಸಮಸ್ಯೆಯಾಗದಿರಲಿ. ಬಸ್ ನಿಲ್ದಾಣ, ವಿಐಪಿ ಪಾರ್ಕಿಂಗ್, ದೇವಸ್ಥಾನದ ಕಾಂಪ್ಲೆಕ್ಸ್ ಹತ್ತಿರ ಅಧಿಕೃತ ವ್ಯಾಪಾರಸ್ಥರಿಗೆ 10/10 ಸ್ಥಳಾವಕಾಶ ನೀಡಲಾಗುವುದು. ಜಾತ್ರಾ ಅವಧಿ ಮುಕ್ತಾಯದ ನಂತರ ಕಾಮಗಾರಿ ನಡೆದಲ್ಲಿ ಸ್ವಯಂ ಪ್ರೇರಿತರಾಗಿ ತೆರವು ನಡೆಸಬೇಕು. ಇದರಿಂದ ನೂರಾರು ಅಂಗಡಿಕಾರರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

’ವ್ಯಾಪಾರವನ್ನೇ ನೆಚ್ಚಿ ಬದುಕು ನಡೆಸಿದ ನಮಗೆ ಅಂಗಡಿಗಳ ತೆರವಿನಿಂದ ಆರ್ಥಿಕವಾಗಿ ಮುಗ್ಗರಿಸಿದ್ದೇವೆ. ಸದ್ಯ ಶಾಶ್ವತವಿಲ್ಲವಾದರೂ ಜಾತ್ರಾ ಸಮಯದಲ್ಲಿ ಅನುಕೂಲ ಕಲ್ಪಿಸಿ. ತಾತ್ಕಾಲಿಕ ಜಾಗೆ ನೀಡಿ ವ್ಯಾಪಾರ ನಡೆಸಲು ಅನುಮತಿ ನೀಡಿರಿ. ಮತ್ತೆ ತೆರವು ನಡೆಸುತ್ತೇವೆ’ ಎಂದು ವ್ಯಾಪಾರಿ ಪ್ರಕಾಶ ಲಮಾಣಿ ಅವರು ಶಾಸಕ ವೈದ್ಯ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ದೇವಸ್ಥಾನಕ್ಕೆ ಭೇಟಿ ನೀಡಿದ ಡಿಸಿ ಮೊಹ್ಮದ ರೋಷನ್ ಅವರು ಅರ್ಧಗಂಟೆಗೂ ಕಡಿಮೆ ಅವಧಿಯಲ್ಲಿ ಸ್ಥಳ ಪರಿಶೀಲಿಸಿದರು. ಬಸ್ ನಿಲ್ದಾಣವೊಂದನ್ನು ವೀಕ್ಷಿಸಿ ತರಾತುರಿಯಲ್ಲಿ ನಿರ್ಗಮಿಸಿದರು.

ಎಸ್‌ಪಿ ಡಾ. ಭೀಮಾಶಂಕರ ಗುಳೇದ, ತಹಶೀಲ್ದಾರ ಎಮ್.ಎನ್.ಹೆಗ್ಗನ್ನವರ, ಡಿವೈಎಸ್ಪಿ ಚಿದಂಬರ ಮಡಿವಾಳರ, ಪಿಐ ಧರ್ಮಾಕರ ಧರ್ಮಟ್ಟಿ, ಪಿಎಸೈ ಕೆ.ಎಮ್. ಬನ್ನೂರ, ಪಿಎಸೈ ಲಕ್ಷö್ಮಣ ಗೌಡಿ, ಮಹೇಶ ಹನಸಿ, ಯಲ್ಲಪ್ಪಗೌಡ ವಿಜಯ ಲಮಾಣಿ, ರಾಮಾಚಾರಿ ಲಮಾಣಿ, ಶಂಕರ ಲಮಾಣಿ, ಕೃಷ್ಣಪ್ಪ ಲಮಾಣಿ, ಚಂದ್ರು ಕಾರಬಾರಿ ಹಾಗೂ ಪ್ರಮುಖರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.