ADVERTISEMENT

ಅಖಿಲ ಭಾರತ ಎನ್‌ಸಿಸಿ ಚಾರಣ ಶಿಬಿರ–‘ಬೆಳಗಾವಿ ಟ್ರೆಕ್-2021’ಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 13:31 IST
Last Updated 21 ಡಿಸೆಂಬರ್ 2021, 13:31 IST
ಬೆಳಗಾವಿಯಲ್ಲಿ ನಡೆದ ಎನ್‌ಸಿಸಿ ಚಾರಣದ ಭಾಗವಾಗಿ ಕೆಡೆಟ್‌ಗಳನ್ನ ರಾಜಹಂಸಗಡ ಕೋಟೆಗೆ ಕರೆದೊಯ್ಯಲಾಯಿತು
ಬೆಳಗಾವಿಯಲ್ಲಿ ನಡೆದ ಎನ್‌ಸಿಸಿ ಚಾರಣದ ಭಾಗವಾಗಿ ಕೆಡೆಟ್‌ಗಳನ್ನ ರಾಜಹಂಸಗಡ ಕೋಟೆಗೆ ಕರೆದೊಯ್ಯಲಾಯಿತು   

ಬೆಳಗಾವಿ: ಎನ್‌ಸಿಸಿ ಗ್ರೂಪ್ ಬೆಳಗಾವಿಯು ಎನ್‌ಸಿಸಿ ನಿರ್ದೇಶನಾಲಯ ಕರ್ನಾಟಕ ಮತ್ತು ಗೋವಾ ಸಹಯೋಗದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಎನ್‌ಸಿಸಿ ಚಾರಣ ಶಿಬಿರ–‘ಬೆಳಗಾವಿ ಟ್ರೆಕ್-2021’ ಯಶಸ್ವಿಯಾಗಿ ಸೋಮವಾರ ಮುಕ್ತಾಯವಾಯಿತು.

ಇಲ್ಲಿನ ಜಾಧವನಗರದ ಎನ್‌ಸಿಸಿ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸಂಜೆಯೊಂದಿಗೆ ಶಿಬಿರಕ್ಕೆ ತೆರ ಬಿದ್ದಿತು. ವಿವಿಧ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 400 ಕೆಡೆಟ್‌ಗಳು ಮತ್ತು 15 ಅಸೋಸಿಯೇಟ್ ಎನ್‌ಸಿಸಿ ಅಧಿಕಾರಿಗಳು ಭಾಗವಹಿಸಿದ್ದರು.

ಕೆಡೆಟ್‌ಗಳನ್ನು ಭಾರತೀಯ ಸೇನೆಯ ಅತ್ಯಂತ ಪ್ರತಿಷ್ಠಿತ ತರಬೇತಿ ಕೇಂದ್ರ ‘ದಿ ಕಮಾಂಡೊ ಸ್ಕೂಲ್’ಗೆ ಕರೆದೊಯ್ಯಲಾಗಿತ್ತು. ಹಾವುಗಳ ನಿರ್ವಹಣೆ, ಲಿಡೊ ಜಂಪ್, ಕಮಾಂಡೊ ಸ್ಲೈಡ್ ಮತ್ತು ನಿರಾಯುಧ ಯುದ್ಧದ ನೇರ ಪ್ರದರ್ಶನವನ್ನು ಕೆಡೆಟ್‌ಗಳಿಗೆ ನೀಡಲಾಯಿತು. ಅವರೂ ಅಭ್ಯಾಸ ನಡೆಸಿದರು. ಉಪನ್ಯಾಸ ಹಾಗೂ ಡೆಮೊಗಳನ್ನು ನೀಡಲಾಯಿತು. ಎಂಎಲ್‌ಐಆರ್‌ಸಿಗೆ ಕರೆದೊಯ್ಯಲಾಯಿತು. ಕೆಡೆಟ್‌ಗಳು ಎಲ್ಲ ಚಟುವಟಿಕೆಗಳಲ್ಲೂ ಉತ್ಸಾಹದಿಂದ ಭಾಗಿಯಾದರು. ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ADVERTISEMENT

ಚಾರಣದ ವ್ಯವಸ್ಥಾಪಕರಾಗಿದ್ದ ಗ್ರೂಪ್ ಕಮಾಂಡರ್ (ಎನ್‌ಸಿಸಿ ಗ್ರೂಪ್ ಬೆಳಗಾವಿ) ಕರ್ನಲ್ ಕೆ. ಶ್ರೀನಿವಾಸ್ ಕೆಡೆಟ್‌ಗಳಿಗೆ ಮಾರ್ಗದರ್ಶನ ಮಾಡಿದರು.

ಕರ್ನಲ್ ರಾಜೀವ್ ಖಜೂರಿಯಾ, ಗ್ರೂಪ್ ಕ್ಯಾಪ್ಟನ್ ಯು.ಡಿ. ಪಾಟ್ಕರ್, ಕರ್ನಲ್ ಜೆ.ಪಿ. ಮಿಶ್ರಾ, ಲೆಫ್ಟಿನೆಂಟ್ ಕರ್ನಲ್ ಸಿ.ಬಿ. ನಂದಕುಮಾರ್, ಸುಬೇದಾರ್ ಮೇಜರ್ ನೀಲೇಶ್ ದೇಸಾಯಿ, ಸುಬೇದಾರ್ ಮಹಾದೇವ ಅವತಾಡೆ, ಲೆಫ್ಟಿನೆಂಟ್ ಅಮಿತ್ ಚಿಂಗಲಿ, ಸೂಪರಿಂಟೆಂಡೆಂಟ್‌ ಸುಭಾಶ್‌ಚಂದ್ರ ಚಿಕ್ಕಪ್ಪನವರ ಪಾಲ್ಗೊಂಡಿದ್ದರು.

ಕೆಡೆಟ್‌ಗಳಾದ ವೇದಾಂತ್ ಕಾಸಿಯಾ ಮತ್ತು ಓಂಪ್ರಕಾಶ್ ನಿರೂಪಿಸಿದರು. ಲೆಫ್ಟಿನೆಂಟ್ ಎಂ.ಎಸ್. ಕುರಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.