ADVERTISEMENT

SSLC Exams | ಸಂಜೆ ಟಿವಿ, ಮೊಬೈಲ್ ಆಫ್ ಮಾಡಿ: ತಹಶೀಲ್ದಾರ್ ಸುರೇಶ್

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 5:56 IST
Last Updated 12 ಫೆಬ್ರುವರಿ 2026, 5:56 IST
<div class="paragraphs"><p>ಆದೇಶ ಪ್ರತಿ</p></div>

ಆದೇಶ ಪ್ರತಿ

   

ನಿಪ್ಪಾಣಿ: 10ನೇ ತರಗತಿಯ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಪೋಷಕರು ಪ್ರತಿದಿನ ಸಂಜೆ 6ರಿಂದ 9ರವರೆಗೆ ಮೊಬೈಲ್ ಫೋನ್ ಮತ್ತು ಟಿವಿಗಳನ್ನು ಆಫ್ ಮಾಡುವಂತೆ ನಿಪ್ಪಾಣಿ ತಹಶೀಲ್ದಾರ್ ಸುರೇಶ್ ಮುಂಜೆ ಸೂಚನೆ ನೀಡಿದ್ದಾರೆ.

ಸೂಚನೆಯ ಕಟ್ಟುನಿಟ್ಟಿನ ಅನುಷ್ಠಾನಕ್ಕಾಗಿ ತಹಶೀಲ್ದಾರರು 8 ಸದಸ್ಯರ ಪ್ರೌಢಶಾಲಾ ಮಟ್ಟದ ಅಧ್ಯಯನ ಮೇಲ್ವಿಚಾರಣಾ ಸಮಿತಿ ರಚಿಸಿದ್ದಾರೆ. ಸಮಿತಿಯಲ್ಲಿ ಮುಖ್ಯ ಶಿಕ್ಷಕರು ಅಧ್ಯಕ್ಷರಾಗಿದ್ದು 10ನೇ ತರಗತಿಯ ಶಿಕ್ಷಕರು ಸಹಕಾರ್ಯದರ್ಶಿಯಾಗಿ ಹಾಗೂ ಪೌರಾಯುಕ್ತರು/ಮುಖ್ಯಾಧಿಕಾರಿ/ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಶಿಶು ಇಲಾಖೆ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರು, ಸಂಬಂಧಪಟ್ಟ ಸಮೂಹ ಸಂಪನ್ಮೂಲ ವ್ಯಕ್ತಿಗಳು, ಗ್ರಾಮ ಆಡಳಿತ ಅಧಿಕಾರಿಗಳು, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು/ಶುಷ್ರೂಕಿಯರು ಮತ್ತು ಸಂಬಂಧಪಟ್ಟ ಗ್ರಾಮದ ಬೀಟ್‌ ಪೊಲೀಸರು ಸದಸ್ಯರಾಗಿದ್ದಾರೆ.

ADVERTISEMENT

ಸಮಿತಿಯು ವಾರಕ್ಕೊಮ್ಮೆ ಸಭೆ ಸೇರಿ ಈ ಕಾರ್ಯದ ಪ್ರಗತಿಯನ್ನು ಪರಿಶೀಲಿಸಬೇಕು. ಪ್ರತಿ ಇಲಾಖೆಯ ಸಿಬ್ಬಂದಿಯ ತಮಗೆ ವಹಿಸಿದ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಪೋಷಕರಿಗೆ ಈ ಅವಧಿಯಲ್ಲಿ ಮೊಬೈಲ್‌ ಬಳಕೆ ಹಾಗೂ ದೂರದರ್ಶನ ವೀಕ್ಷಣೆ ಮಾಡದಂತೆ ಹಾಗೂ ವಿದ್ಯಾರ್ಥಿಯ ಕಲಿಕೆ/ಅಭ್ಯಾಸಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡಲು ಕೋರಬೇಕು. ಅಕ್ಕಪಕ್ಕದ ಮನೆಯವರಿಗೂ ಸಹಕರಿಸಲು ಕೋರಬೇಕು’ ಎಂದು ಸಮಿತಿಗೆ ಸಲಹೆ ನೀಡಿದ್ದಾರೆ.

ಪತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.