ಬೆಳಗಾವಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್ಪಿ ಹಾಗೂ ಬಿಪಿ ಕಂಪನಿಯ ಬಂಕ್ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುತ್ತಲೇ ಇದೆ.
ಲೀಟರ್ ಪೆಟ್ರೋಲ್ ಬೆಲೆಯು ಬರೋಬ್ಬರಿ ₹ 100ರ ಗಡಿ ದಾಟಿದೆ.
ಡೀಸೆಲ್ ದರ ₹ 92ರ ಗಡಿ ದಾಟಿದೆ. ತೈಲ ದರವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು, ಕೋವಿಡ್–19 ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ತೈಲ ಕಂಪನಿ;ಪೆಟ್ರೋಲ್;ಡೀಸೆಲ್
ಜೂನ್ 13;ಜೂನ್ 20;ಜೂನ್ 13;ಜೂನ್ 20
ಎಚ್ಪಿ;99.13;100.27;92.06;93.13
ಐಒಸಿ;99.14;100.28;92.07;93.12
ಬಿಪಿ;99.15;100.29;92.08;93.13
(ಲೀಟರ್ಗೆ₹ಗಳಲ್ಲಿ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.