ADVERTISEMENT

ಕಾಗವಾಡ | ಕಾರು ಅಪಘಾತದಲ್ಲಿ ಗರ್ಭಿಣಿ ಸಾವು: ಹತ್ಯೆ ಶಂಕೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 2:27 IST
Last Updated 10 ಸೆಪ್ಟೆಂಬರ್ 2025, 2:27 IST
ಮೃತ ಗರ್ಭಿಣಿ ಚೈತಾಲಿ ಕಿರಣಗಿ ಚಿತ್ರ.
ಮೃತ ಗರ್ಭಿಣಿ ಚೈತಾಲಿ ಕಿರಣಗಿ ಚಿತ್ರ.   

ಕಾಗವಾಡ: ತಾಲ್ಲೂಕಿನ ಉಗಾರ ಬುದ್ರುಕ್ ಗ್ರಾಮದ ಗರ್ಭಿಣಿ ಮಹಿಳೆ ಚೈತಾಲಿ ಪ್ರದೀಪ ಕೀರಣಗಿ(22)ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು ಗಂಡನೆ ಹತ್ಯೆ ಮಾಡಿರುವುದಾಗಿ ಚೈತಾಲಿ ತಂದೆ ಅಣ್ಣಾಸಾಬ ಮಾಳಿ ಕಾಗವಾಡ ಠಾಣೆಗೆ ದೂರು ನೀಡಿದ್ದಾರೆ.

’ಪ್ರದೀಪ ಹಾಗೂ ಚೈತ್ರಾಲಿ ಒಂದೇ ಗ್ರಾಮದವರು. ಪ್ರೀತಿಸಿ ಮದುವೆಯಾಗಿದ್ದರು. ಚೈತ್ರಾಲಿ ಏಳು ತಿಂಗಳ ತುಂಬು ಗರ್ಭಿಣಿಯಾಗಿದ್ದಳು. ಗಂಡನ ಮನೆಯಲ್ಲಿ ಕಿರುಕುಳ ಹಾಗೂ ನಿನ್ನನ್ನು ಕೊಲೆ ಮಾಡುವುದಾಗಿ ಪದೇ ಪದೇ ಪ್ರದೀಪ ಹೇಳುತ್ತಿದ್ದನ್ನು ಅದನ್ನು ನಮ್ಮ ಮುಂದೆ ಹೇಳಿದ್ದಳು’ ಎಂದು ಪೋಷಕರು ತಿಳಸಿದ್ದಾರೆ.

ಭಾನುವಾರ ಚೈತ್ರಾಲಿಯನ್ನು ಆಸ್ಪತ್ರೆಗೆ ತೋರಿಸುವುದಾಗಿ ಪತಿ ಪ್ರದೀಪ ಬೈಕ್ ಮೇಲೆ ಕೂರಿಸಿಕೊಂಡು ಶಿರಗುಪ್ಪಿ ಗ್ರಾಮಕ್ಕೆ ಹೋಗಿದ್ದ. ಮಾರ್ಗ ಮಧ್ಯ ಬೈಕ್ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡಲು ಹೋದಾಗ ಶಿರಗುಪ್ಪಿ ಕಡೆಯಿಂದ ಬಂದ ಕಾರು ರಸ್ತೆ ಬದಿಗೆ ನಿಂತ ಚೈತ್ರಾಲಿ ಮೇಲೆ ಹರಿದಿದೆ ರಕ್ತದಲ್ಲಿ ಬಿದ್ದಿದ್ದ ಚೈತ್ರಾಲಿಯನ್ನು ಪತಿ ಪ್ರದೀಪ ಅದೇ ಕಾರಿನಲ್ಲಿ ಮಿರಜ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾನೆ. ಚಿಕಿತ್ಸೆಗೆ ಸ್ಪಂದಿಸದೇ ಆಕೆ ಸಾವಿಗೀಡಾಗಿದ್ದಾಳೆ.

’ನನ್ನ ಮಗಳನ್ನು ಕಾರು ಹಾಯಿಸಿ ಕೊಲೆ ಮಾಡಿ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಅಪಘಾತ ಎಂದು ಬಿಂಬಿಸಿದ್ದಾರೆ. ಆಕೆಯನ್ನು ಕೊಲೆ ಮಾಡಲಾಗಿದೆ’ ಎಂದು ತಂದೆ ಅಣ್ಣಾಸಾಬ ಮಾಳಿ ಕಾಗವಾಡ ಠಾಣೆಗೆ ದೂರು ನೀಡಿದ್ದಾರೆ ದೂರಿನ ಅನ್ವಯ ಪೋಲಿಸರು ಪತಿ ಪ್ರದೀಪ ಹಾಗೂ ಇನ್ನಿಬ್ಬರು ಮತ್ತು ಕಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಸ್ಥಳಕ್ಕೆ ಪೋಲಿಸ್ ಉಪಾಧಿಕ್ಷಕ ರಾಮನಗೌಡ ಬಸರಗಿ,ಡಿವೈಎಸ್ಪಿ ಪ್ರಶಾಂತ ಮುನ್ನೋಳಿ,ಸಿಪಿಐ ಸಂತೋಷ ಹಳ್ಳೂರ, ಪಿಎಸ್ಐ ರಾಘವೇಂದ್ರ ಖೋತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.