ಬೆಳಗಾವಿ: ನಗರದ ಹಿಂಡಲಗಾ– ಸುಳಗಾ ರಸ್ತೆಯಲ್ಲಿರುವ ಲಾಡ್ಜ್‌ವೊಂದರ ಮೇಲೆ ಬುಧವಾರ ರಾತ್ರಿ ದಾಳಿ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಹಲವು ಯುವತಿಯರು ಹಾಗೂ ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.
ಇಲ್ಲಿನ ಮಹಿಳಾ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀದೇವಿ ಪಾಟೀಲ ಅವರ ನೇತೃತ್ವದಲ್ಲಿ ಅಂಬಿಕಾ ಲಾಡ್ಜ್ ಮೇಲೆ ದಾಳಿ ಮಾಡಿದ ಪೊಲೀಸರು, ವೇಶ್ಯಾವಾಟಿಕೆಯ ಜಾಲವನ್ನು ಭೇದಿಸಿದರು.
ಇದಕ್ಕೆ ಕುಮ್ಮಕ್ಕು ನೀಡಿತ್ತಿದ್ದ ಗವಳಿ ಗಲ್ಲಿಯ ನಿವಾಸಿ ಸೋಮನಾಥ ಗವಳಿ, ಕಂಗ್ರಾಳಿಯ ರಾಹುಲ್ ಪಾಟೀಲ, ಮಾರಿಹಾಳ ಗ್ರಾಮದ ರಮೇಶ ತಾರಿಹಾಳ, ಕೆ.ಎಚ್.ಕಂಗ್ರಾಳಿಯ ಮಯೂರ ಪಾಟೀಲ ಅವರನ್ನು ಬಂಧಿಸಿದರು.
ಈ ಜಾಲದಲ್ಲಿ ಸಿಲುಕಿದ ಯುವತಿಯರು ಹಾಗೂ ಮಹಿಳೆಯರನ್ನು ರಕ್ಷಣೆ ಮಾಡಿ ಮಹಿಳಾ ನಿಲಯಕ್ಕೆ ಕಳುಹಿಸಲಾಗಿದೆ ಎಂದು ಮಹಿಳಾ ಠಾಣೆ ಪೊಲೀಸರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.