ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಬೆಳಗಾವಿಯ ‘ಹೆಲ್ಪ್ ಫಾರ್ ನೀಡಿ’ ತಂಡ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 19:30 IST
Last Updated 31 ಡಿಸೆಂಬರ್ 2020, 19:30 IST
ಬೆಳಗಾವಿಯಲ್ಲಿ ‘ಹೆಲ್ಪ್ ಫಾರ್ ನೀಡಿ’ ತಂಡದ ಮಹಿಳೆಯರು ಕೋವಿಡ್ ಸೋಂಕಿತರ ಅಂತ್ಯಕ್ರಿಯೆ ನೆರವೇರಿಸಿದ ಕ್ಷಣ
ಬೆಳಗಾವಿಯಲ್ಲಿ ‘ಹೆಲ್ಪ್ ಫಾರ್ ನೀಡಿ’ ತಂಡದ ಮಹಿಳೆಯರು ಕೋವಿಡ್ ಸೋಂಕಿತರ ಅಂತ್ಯಕ್ರಿಯೆ ನೆರವೇರಿಸಿದ ಕ್ಷಣ   

ಉದ್ಯಮಿಗಳು, ಗೃಹಿಣಿಯರು, ವೈದ್ಯರು, ವಿವಿಧ ರಂಗದವರು ಸೇರಿ ಕಟ್ಟಿಕೊಂಡಿರುವ ‘ಹೆಲ್ಪ್‌ ಫಾರ್ ನೀಡಿ’ (ಅವಶ್ಯವಿರುವವರಿಗೆ ಸಹಾಯ) ತಂಡ ನಮ್ಮದು. ನಾನೂ ಸೇರಿದಂತೆ 17 ಮಂದಿ ತಂಡವಾಗಿ ಸೇವಾ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದೇವೆ.

ಲಾಕ್‌ಡೌನ್‌ ಸಂದರ್ಭದಲ್ಲಿ 483ಕ್ಕೂ ಹೆಚ್ಚಿನ ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ಹಾಗೂ ಗುಣಮುಖರಾದ ಮೇಲೆ ಆಸ್ಪತ್ರೆಯಿಂದ ಮನೆಗೆ ಸಾಗಿಸಿದೆವು. 193 ಶವಗಳನ್ನು ಸಾಗಿಸಿದೆವು. 100 ಮಂದಿಯ ಶವಸಂಸ್ಕಾರವನ್ನು ನಮ್ಮ ವೆಚ್ಚದಲ್ಲೇ ನೆರವೇರಿಸಿ ಬಡ ಕುಟುಂಬಗಳಿಗೆ ಸಹಾಯ ಮಾಡಿದೆವು.

ಈ ಪೈಕಿ ಹಲವು ಶವಗಳ ಅಂತ್ಯಸಂಸ್ಕಾರವನ್ನು, ತಂಡದ ಮಾಧುರಿ ಜಾಧವ, ಭಾಗ್ಯಶ್ರೀ ಅನಗೋಳಕರ ಮೊದಲಾದವರು ಸೇರಿ ನೆರವೇರಿಸಿದ್ದು ವಿಶೇಷ.ಮಾಧುರಿ ಜಾಧವ್ ಸ್ವತಃ ಆಂಬುಲೆನ್ಸ್ ಡ್ರೈವ್ ಮಾಡಿಕೊಂಡು ವೃದ್ಧರನ್ನು ಆಸ್ಪತ್ರೆಗೆ ಸಾಗಿಸಿದರು.

ADVERTISEMENT

ಪಿಪಿಇ ಕಿಟ್ ಧರಿಸಿ ಸುರಕ್ಷತಾ ಕ್ರಮಗಳೊಂದಿಗೆ ಅಸಹಾಯಕರ ಸಹಾಯಕ್ಕೆ ಮುಂದಾದೆವು. ಅವಶ್ಯ ಇರುವವರಿಗೆ ಆಕ್ಸಿಜನ್ ಸಿಲಿಂಡರ್‌ ಕೂಡ ಪೂರೈಸಿದೆವು. ಹಲಗಾ–ಬಸ್ತವಾಡ ಗ್ರಾಮದ ಅನಾಥ ವೃದ್ಧೆಯ ಶವವನ್ನು ಮಾಧುರಿ ಜಾಧವ್ ಹಾಗೂ ನಾನು ಸ್ಮಶಾನಕ್ಕೆ ಸಾಗಿಸಿದ್ದೆವು. ದಾನಿಗಳೂ ನಮಗೆ ಕೈಜೋಡಿಸುತ್ತಿದ್ದಾರೆ. ಉಳಿದಂತೆ ನಾವೂ ವೈಯಕ್ತಿಕವಾಗಿ ಹಣ ಹಾಕುತ್ತಿರುತ್ತೇವೆ.

–ಸುರೇಂದ್ರ ಅನಗೋಳ, ‘ಹೆಲ್ಪ್ ಫಾರ್ ನೀಡಿ’ ತಂಡ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.