ADVERTISEMENT

ರಂಜಾನ್ ಉಪವಾಸ ಮಾಡಿದ 6ರ ಪೋರಿ

​ಪ್ರಜಾವಾಣಿ ವಾರ್ತೆ
Published 24 ಮೇ 2020, 10:37 IST
Last Updated 24 ಮೇ 2020, 10:37 IST
ಬೇಬಿ ಐಷಾ
ಬೇಬಿ ಐಷಾ   

‌ಬೆಳಗಾವಿ: ಪವಿತ್ರ ರಂಜಾನ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಮರು ಕಟ್ಟುನಿಟ್ಟಾದ ಉಪವಾಸ ವ್ರತ ಪಾಲಿಸುತ್ತಾರೆ. ಗೋಕಾಕದ 6 ವರ್ಷದ ಬಾಲಕಿ ದೊಡ್ಡವರೊಂದಿಗೆ ತಿಂಗಳವರೆಗೆ ಉಪವಾಸ ಮಾಡುವ ಮೂಲಕ ಗಮನಸೆಳೆದಿದ್ದಾಳೆ.

ಗೋಕಾಕದ ಬಾಂಬೆ ಚಾಳನಲ್ಲಿರುವ ಯುವ ಕಾಂಗ್ರೆಸ್ ಮುಖಂಡ ಜಾವೀದ ಮುಲ್ಲಾ ಅವರ ಪುತ್ರಿ ಬೇಬಿ ಐಷಾ (6) ರಂಜಾನ್ ಪ್ರಯುಕ್ತ ತಿಂಗಳು ಉಪವಾಸ ಕೈಗೊಂಡಿದ್ದಾರೆ. ಯುಕೆಜಿ ಓದುತ್ತಿರುವ ಐಷಾ, ಕಳೆದ ವರ್ಷ ರಂಜಾನ್ ವೇಳೆ ಒಂದು ದಿ‌ನ ಉಪವಾಸ ಆಚರಿಸಿದ್ದಳು. ಆದರೆ ಈ ಬಾರಿ ರಂಜಾನ್‌ ಮಾಸದ ಮೊದಲ ದಿನದಿಂದಲೂ ಉಪವಾಸ ಮಾಡಿದ್ದಾಳೆ.

ನಿತ್ಯ ನಸುಕಿನ ಜಾವ 4ಕ್ಕೆ ತಂದೆ ತಾಯಿ ಜೊತೆಗೆ ಎದ್ದು ಮನೆಯವರ ಜೊತೆ ಪ್ರಾರ್ಥನೆ ಸಲ್ಲಿಸಿದ್ದಾಳೆ. ಒಂದು ದಿನವೂ ಈ ಆಚರಣೆ ತಪ್ಪಿಸಿಲ್ಲ. ಮಗಳ ಉಪವಾಸ ಕಂಡು ಮನೆಯವರು ಸಹ ಹೆಮ್ಮೆ ಪಡುತ್ತಿದ್ದಾರೆ. ಐಷಾಳ ಅಜ್ಜ ನೀರಾವರಿ ಇಲಾಖೆ ನಿವೃತ್ತ ಎಂಜಿನಿಯರ್‌ ಹುಸೇನ್ ದಸ್ತಗೀರಸಾಬ ಮುಲ್ಲಾ. ಮೊಮ್ಮಗಳ ಕಠಿಣ ಉಪವಾಸಕ್ಕೆ ಅವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ಬಾಲಕಿಯ ತಂದೆ ಜಾವೀದ್ ಮುಲ್ಲಾ, ‘ಮಗಳ ಬಗ್ಗೆ ನನಗೆ ಮಾತ್ರವಲ್ಲ ಇಡೀ ಕುಟುಂಬಕ್ಕೆ ಹೆಮ್ಮೆ ಇದೆ. ಬಡಾವಣೆಯ ಜನರು ಐಷಾ ಬಗ್ಗೆ ಹೆಮ್ಮೆಪಡುತ್ತಿರುವುದನ್ನು ಕಂಡು ಸಂತೋಷವಾಗುತ್ತಿದೆ’ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.