ADVERTISEMENT

ರಾಯಬಾಗ| ಹಿಂದೂ ದೇವತೆಗಳ ಚಿತ್ರ: ಪಟಾಕಿ ಮಾರಾಟ ನಿಷೇಧಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 2:37 IST
Last Updated 17 ಅಕ್ಟೋಬರ್ 2025, 2:37 IST
ಹಿಂದೂ ದೇವತೆಗಳ ಚಿತ್ರಗಳುಳ್ಳ ಪಟಾಕಿಗಳ ಮಾರಾಟ ನಿಷೇಧ ಮಾಡುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯ ಸದಸ್ಯರು ರಾಯಬಾಗ ಪೊಲೀಸ್ ಠಾಣೆಯಲ್ಲಿ ಸಿಪಿಐ ಬಿ.ಎಸ್. ಮಂಟೂರ ಅವರಿಗೆ ಮನವಿ ಸಲ್ಲಿಸಿದರು 
ಹಿಂದೂ ದೇವತೆಗಳ ಚಿತ್ರಗಳುಳ್ಳ ಪಟಾಕಿಗಳ ಮಾರಾಟ ನಿಷೇಧ ಮಾಡುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯ ಸದಸ್ಯರು ರಾಯಬಾಗ ಪೊಲೀಸ್ ಠಾಣೆಯಲ್ಲಿ ಸಿಪಿಐ ಬಿ.ಎಸ್. ಮಂಟೂರ ಅವರಿಗೆ ಮನವಿ ಸಲ್ಲಿಸಿದರು    

ರಾಯಬಾಗ: ಹಿಂದೂ ದೇವತೆಗಳು ಮತ್ತು ನಮ್ಮ ಭಾರತ ದೇಶದ ಮಹಾನ್ ವ್ಯಕ್ತಿಗಳ ಚಿತ್ರಗಳನ್ನು ಅಳವಡಿಸಿದ ಪಟಾಕಿಗಳು ಹಾಗೂ ಚೀನಾ ನಿರ್ಮಿತ ಪಟಾಕಿಗಳ ಮಾರಾಟದ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು ಗುರುವಾರ ರಾಯಬಾಗ ಪೊಲೀಸ್ ಠಾಣೆಯಲ್ಲಿ ಸಿಪಿಐ ಬಿ.ಎಸ್. ಮಂಟೂರ ಅವರಿಗೆ ಮನವಿ ಸಲ್ಲಿಸಿದರು.

ವಕೀಲ ಮೇಘರಾಜ್ ಮಾಳಗಿ ಮಾತನಾಡಿ, ದೇವತೆಗಳ ಚಿತ್ರಗಳುಳ್ಳ ಪಟಾಕಿಗಳ ಬಳಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಹುದು ಎಂಬ ಕಾರಣದಿಂದ ಇಂತಹ ಪಟಾಕಿಗಳ ತಯಾರಿ ಹಾಗೂ ಮಾರಾಟ ನಿಷೇಧಿಸಲು ಕ್ರಮ ಕೈಗೊಳ್ಳಬೇಕು. ಅಲ್ಲದೇ ಚೀನಾ ನಿರ್ಮಿತ ಪಟಾಕಿಗಳು ಕೇವಲ ಆರ್ಥಿಕ ಹಾನಿಯಷ್ಟೇ ಅಲ್ಲ, ಪರಿಸರಕ್ಕೂ ಅಪಾಯಕಾರಿಗಳು. ದೇಶೀಯ ಉದ್ಯಮಗಳಿಗೆ ಉತ್ತೇಜನ ನೀಡಲು ಭಾರತೀಯ ಪಟಾಕಿಗಳಿಗೆ ಪ್ರಾಮುಖ್ಯತೆ ನೀಡಬೇಕು ಎಂದರು.

ಶ್ರೀರಾಮ ಸೇನಾ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಶಿವಾನಂದ ಬಂತೆ, ಶ್ರೀರಾಮ ಸೇನಾ ಗೋ ರಕ್ಷಾ ಪಡೆ ರಾಯಬಾಗ ತಾಲ್ಲೂಕು ಪ್ರಮುಖ ಶ್ರೀನಾಥ ಪೂಜಾರಿ,ಸಿದ್ದು ದೇಸಾಯಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.