ADVERTISEMENT

ರಾಯಬಾಗ | ಮಾಂಗಲ್ಯ ಸರ ಕಳವು: ಓರ್ವ ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 2:43 IST
Last Updated 6 ಸೆಪ್ಟೆಂಬರ್ 2025, 2:43 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ರಾಯಬಾಗ: ಮಹಿಳೆಯೊಬ್ಬರ 30 ಗ್ರಾಂ ಚಿನ್ನದ ಮಾಂಗಲ್ಯದ ಸರ ಎಗರಿಸಿದ್ದ ಇಬ್ಬರು ಕಳ್ಳರ ಪೈಕಿ ಒಬ್ಬನನ್ನು ಹಿಡಿಯುವಲ್ಲಿ ರಾಯಬಾಗ ಪೊಲೀಸರು ಯಶಸ್ವಿಯಾಗಿದ್ದಾರೆ.

ಮುಗಳಖೋಡ ಪಟ್ಟಣದ ರೂಪಾ ಮಹೇಶ ಖೇತಗೌಡರ ಅವರ ಮಾಂಗಲ್ಯ ಎಗರಿಸಲಾಗಿತ್ತು. ಸಂಕೇಶ್ವರದಿಂದ ಮರಳುವಾಗ ಬೈಕ್‌ ಮೇಲೆ ಬಂದ ಸರಗಳ್ಳರು ಮಾಂಗಲ್ಯವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಸಿಪಿಐ ಬಿ.ಎಸ್. ಮಂಟೂರ ಕ್ಷಿಪ್ರ ಪ್ರಯತ್ನ ನಡೆಸಿದರು. ಗೃಹರಕ್ಷಕ ಸಿಬ್ಬಂದಿ ಕಾರ್ಯಪ್ರವತ್ತರಾಗಿ ಸಿನಿಮೀಯ ರೀತಿಯಲ್ಲಿ ಬೈಕ್ ಬೆನ್ನಟ್ಟಿ ಆರೋಪಿಯನ್ನು ಬಂಧಿಸಿದರು. ರಾಯಬಾಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.