
ಬೆಳಗಾವಿ: ಬ್ಯಾಂಕಿಂಗ್ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಇಲ್ಲಿನ ಬಿಡಿಸಿಸಿ ಬ್ಯಾಂಕಿಗೆ ಆರ್‌ಬಿಐ ₹2 ಲಕ್ಷ ದಂಡ ವಿಧಿಸಿದೆ ಎಂದು ಮೂಲಗಳು ತಿಳಿಸಿವೆ.
ಫೆ.23ರಂದೇ ಈ ಆದೇಶ ಹೊರಬಿದ್ದಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ–1949ರ ಸೆಕ್ಷನ್ 20 ಅನ್ನು ಸೆಕ್ಷನ್ 56ರೊಂದಿಗೆ ಓದಿದ ನಿಯಮಗಳ ಉಲ್ಲಂಘನೆ ಹಾಗೂ ‘ಗೋಲ್ಡ್ ಲೋನ್ – ಬುಲೆಟ್ ರಿಪೇಮೆಂಟ್’ ಮತ್ತು ‘ವಾಣಿಜ್ಯ ರಿಯಲ್ ಎಸ್ಟೇಟ್‌ಗೆ ಎಕ್ಸ್‌ಪೋಜರ್’ ಕುರಿತು ಆರ್‌ಬಿಐ ನೀಡಿದ್ದ ನಿರ್ದೇಶನಗಳನ್ನು ಪಾಲಿಸದಿರುವುದು ಈ ದಂಡಕ್ಕೆ ಕಾರಣವಾಗಿದೆ. ಸೆಕ್ಷನ್ 47A(1)(ಸಿ) ಅನ್ನು ಸೆಕ್ಷನ್ 46(4)(i) ಮತ್ತು 56ರೊಂದಿಗೆ ಓದಿದ ಅಧಿಕಾರದಡಿ ಆರ್‌ಬಿಐ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ನಿರ್ದೇಶಕರಿಗೆ ಸಂಬಂಧಿತ ವ್ಯಕ್ತಿಗಳಿಗೆ ಸಾಲ ಮಂಜೂರು, ನಿಗದಿತ ಮಿತಿಯನ್ನು ಮೀರಿ ‘ಬುಲೆಟ್ ರಿಪೇಮೆಂಟ್’ ಯೋಜನೆಯಡಿ ಚಿನ್ನದ ಸಾಲ, ವಸತಿಯೇತರ ವಾಣಿಜ್ಯ ರಿಯಲ್ ಎಸ್ಟೇಟ್ ಯೋಜನೆಗೆ ಸಾಲ ಮಂಜೂರು ಮುಂತಾದ ಕಾರಣಗಳನ್ನು ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.