ADVERTISEMENT

ದೇಗುಲ ಮರು ನಿರ್ಮಾಣಕ್ಕೆ ಆರ್ಥಿಕ ನೆರವಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 12:46 IST
Last Updated 18 ಅಕ್ಟೋಬರ್ 2021, 12:46 IST
ರಾಮದುರ್ಗದ ನಿಂಗಾಪೂರ ಪೇಟೆಯ ನಿವಾಸಿಗಳು ಅಲ್ಲಿನ ಈಶ್ವರ ದೇವಾಲಯ ಮರುನಿರ್ಮಾಣಕ್ಕೆ ಧನಸಹಾಯ ಒದಗಿಸುವಂತೆ  ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಬೆಳಗಾವಿಯಲ್ಲಿ ಸೋಮವಾರ ಮನವಿ ಸಲ್ಲಿಸಿದರು
ರಾಮದುರ್ಗದ ನಿಂಗಾಪೂರ ಪೇಟೆಯ ನಿವಾಸಿಗಳು ಅಲ್ಲಿನ ಈಶ್ವರ ದೇವಾಲಯ ಮರುನಿರ್ಮಾಣಕ್ಕೆ ಧನಸಹಾಯ ಒದಗಿಸುವಂತೆ  ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಬೆಳಗಾವಿಯಲ್ಲಿ ಸೋಮವಾರ ಮನವಿ ಸಲ್ಲಿಸಿದರು   

ಬೆಳಗಾವಿ: ‘ರಾಮದುರ್ಗ ಪಟ್ಟಣದ ನಿಂಗಾಪೂರಪೇಟೆಯ ಈಶ್ವರ ದೇವಾಲಯ ಮರು ನಿರ್ಮಾಣಕ್ಕೆ ಧನಸಹಾಯ ನೀಡಬೇಕು’ ಎಂದು ಅಲ್ಲಿನ ನಿವಾಸಿಗಳು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

‘ಅದು ಪುರಾತನ ದೇವಸ್ಥಾನವಾಗಿದೆ. ಕೆಲವು ವರ್ಷಗಳಿಂದ ಭಾರಿ ಮಳೆ ಹಾಗೂ ಮಲಪ್ರಭಾ ನದಿಯಲ್ಲಿ ಉಂಟಾದ ಪ್ರವಾಹಕ್ಕೆ ತುತ್ತಾಗಿ ದೇವಸ್ಥಾನಕ್ಕೆ ಹಾನಿಯಾಗಿದೆ. ಅದನ್ನು ಮರುನಿರ್ಮಾಣ ಮಾಡಬೇಕಾದ ಅಗತ್ಯವಿದೆ. ಮುಜರಾಯಿ ಇಲಾಖೆ ಮೂಲಕ ಒದಗಿಸಬೇಕು’ ಎಂದು ಕೋರಿದರು.

‘ಸಾರ್ವಜನಿಕ ಗ್ರಂಥಾಲಯ ಸ್ಥಾಪಿಸಬೇಕು. ರಾಮದುರ್ಗ ತಾಲ್ಲೂಕು ಆಸ್ಪತ್ರೆಯು ದೂರದಲ್ಲಿರುವ ಕಾರಣ, ನಮ್ಮ ಪೇಟೆಯಲ್ಲೇ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕು. ಸಮಾಜದ ವತಿಯಿಂದ ಖಾಲಿ ಜಾಗ ನೀಡುತ್ತೇವೆ. ಅಲ್ಲಿ ಆರೋಗ್ಯ ಕೇಂದ್ರ ಸ್ಥಾಪಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ಮುಖಂಡರಾದ ಸಂಕಪ್ಪ ಮುಕೈನ್ನವರ,‌ ಭರಮಣ್ಣ ವಾಳಿ, ನಾರಾಯಣಪ್ಪ ಹೆಗಡೆ, ನೇಮಣ್ಣ ಹಾಲೊಳ್ಳಿ, ಗಣಪತಿ ಗಾರಗಿ, ಷಣ್ಮುಖ ಮುಕೈನ್ನವರ, ಕಾಶಪ್ಪ ಹೆಗಡೆ, ಲುಮೇಶ ಪಟ್ಟದಕಲ್ಲ, ಈರಣ್ಣ ನಂದಿ, ನಾರಾಯಣ ಮುಕೈನ್ನವರ, ಸಂತೋಷ ಶಾಗಾಂವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.