ADVERTISEMENT

ʼಗ್ರಾಮೀಣ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ’

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 2:37 IST
Last Updated 1 ಫೆಬ್ರುವರಿ 2026, 2:37 IST
<div class="paragraphs"><p>ಗೋಕಾಕ ತಾಲ್ಲೂಕಿನ ಘಟಪ್ರಭಾದ ಎಸ್‌.ಡಿ.ಟಿ. ಸಂಯುಕ್ತ ಪ.ಪೂ. ಮಹಾವಿದ್ಯಾಲಯ ಆವರಣದಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡವನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿದರು.</p></div>

ಗೋಕಾಕ ತಾಲ್ಲೂಕಿನ ಘಟಪ್ರಭಾದ ಎಸ್‌.ಡಿ.ಟಿ. ಸಂಯುಕ್ತ ಪ.ಪೂ. ಮಹಾವಿದ್ಯಾಲಯ ಆವರಣದಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡವನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿದರು.

   

ಘಟಪ್ರಭಾ (ಗೋಕಾಕ): ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ. ಕೇವಲ ಶಿಕ್ಷಣ ನೀಡುವುದು ನಮ್ಮ ಉದ್ದೇಶ ಆಗಬಾರದು, ಗುಣಮಟ್ಟದ ಶಿಕ್ಷಣ ನೀಡುವುದರ ಕುರಿತೂ ನಾವು ಗಮನಹರಿಸಬೇಕೆಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಶನಿವಾರ ಇಲ್ಲಿನ ಎಸ್.ಡಿ.ಟಿ. ಸಂಯುಕ್ತ ಪ.ಪೂ. ಮಹಾವಿದ್ಯಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶಾಲಾ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದರು.

ADVERTISEMENT

ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ರಾಷ್ಟ್ರೀ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವಂತೆ ನಾವು ಬೆಳಸಬೇಕಾದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಮತ್ತು ಕಿತ್ತೂರ ಶಾಸಕ ಬಾಬಾಗೌಡ ಪಾಟೀಲ ಮಾತನಾಡಿದರು.

ಬೆಳಗಾವಿ ನಾಗನೂರ ರುದ್ರಾಕ್ಷಿಮಠದ ಶ್ರೀ ಡಾ. ಅಲ್ಲಮಪ್ರಭು ಸ್ವಾಮೀಜಿ, ಅರಭಾವಿ ಶ್ರೀ ದುರದುಂಡೀಶ್ವರ ಮಠದ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಗುರುಬಸವಲಿಂಗ ಸ್ವಾಮೀಜಿ ಮಾತನಾಡಿದರು.

ಶಾಲೆಯ ನೂತನ ಕಟ್ಟಡಕ್ಕೆ ಪೀಠೋಪಕರಣಗಳನ್ನು ದೇಣಿಗೆ ನೀಡಿದ ಮಹನಿಯರನ್ನು ಸತ್ಕರಿಸಿ, ಹಳೆಯ ವಿರ್ದ್ಯಾಥಿಗಳನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಜೆ.ಜಿ. ಸಹಕಾರಿ ಆಸ್ಪತ್ರೆಯ ಅಧ್ಯಕ್ಷ ಅಪ್ಪಯ್ಯಪ್ಪ ಬಡಕುಂದ್ರಿ, ಎಸ್‌ಡಿಟಿ. ಸಂಸ್ಥೆಯ ಸಂಸ್ಥಾಪಕಿ ಸಿದ್ಧವ್ವಾ ಶೆಟ್ಟೆಪ್ಪ ಕಾಡದವರ, ಗೋಕಾಕ ತಹಶೀಲ್ದಾರ್‌ ಮೋಹನ ಭಸ್ಮೆ, ಚಿಕ್ಕೋಡಿ ಡಿಡಿಪಿಐ. ಪಿ.ಐ.ಭಂಡಾರಿ, ಘಟಪ್ರಭಾ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಎಚ್.ಡಿ.ಮುಲ್ಲಾ, ರಾಜೇಂದ್ರ ತೇರದಾಳ, ಪುರಸಭೆ ಮುಖ್ಯಾಧಿಕಾರಿ ಎಂ.ಎಸ್.ಪಾಟೀಲ, ಮಾರುತಿ ಯಡ್ರಾವಿ, ಎಲ್.ಕೆ.ತೋರಣಗಟ್ಟಿ, ಕೆ.ಎಸ್.ನಾಗರಾಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಮುಖರಾದ ಡಿ.ಎಂ.ದಳವಾಯಿ, ರಾಮಣ್ಣ ಹುಕ್ಕೇರಿ, ಸುರೇಶ ಕಾಡದವರ, ರಮೇಶ ತುಕ್ಕಾನಟ್ಟಿ, ಪರಶುರಾಮ ಗಾಡಿವಡ್ಡರ, ಕಾಡಪ್ಪ ಕರೋಶಿ, ಮಲ್ಲಪ್ಪ ಕಮತ, ಗಂಗಾಧರ ಬಡಕುಂದ್ರಿ, ಮುತ್ತಣ್ಣ ಹತ್ತರವಾಟ, ಪ್ರವೀಣ ಮಟಗಾರ, ಮಲ್ಲಿಕಾರ್ಜುನ ತುಕ್ಕಾನಟ್ಟಿ ನಾಗರಾಜ ನಾಯಿಕ, ಸುಧೀರ ಜೋಡಟ್ಟಿ, ಲಗಮಣ್ಣ ನಾಗನ್ನವರ, ಈರಣ್ಣಾ ಕಲಕುಟಗಿ ಮತ್ತಿತರರು ಪಾಲ್ಗೊಂಡಿದ್ದರು. ಪ್ರಾಸ್ತಾವಿಕವಾಗಿ ನಿವೃತ್ತ ಪ್ರಾಚಾರ್ಯ ವಿ.ಕೆ.ನಾಯಿಕ ಮಾತನಾಡಿದರು, ಶಿಕ್ಷಕ ಆರ್.ಡಿ.ಉಪ್ಪಾರ ಸ್ವಾಗತಿಸಿದರು, ಭಾನುಮತಿ ಬಿ.ಸಿ. ನಿರೂಪಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.