ADVERTISEMENT

ಪಂಜಾಬ್‌ನ ಸೇನಾ ಶಿಬಿರದಲ್ಲಿ ಗುಂಡು ಹಾರಿಸಿದ ಯೋಧ ಯಮಕನಮರಡಿಯವರು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 8:31 IST
Last Updated 7 ಮಾರ್ಚ್ 2022, 8:31 IST
ಗುರುನಾನಕ್ ದೇವ್ ಆಸ್ಪತ್ರೆಯಿಂದ ಮೃತದೇಹಗಳನ್ನು ಶಿಫ್ಟ್ ಮಾಡುತ್ತಿರುವ ಬಿಎಸ್ಎಫ್ ಸಿಬ್ಬಂದಿ: ಪಿಟಿಐ ಚಿತ್ರ
ಗುರುನಾನಕ್ ದೇವ್ ಆಸ್ಪತ್ರೆಯಿಂದ ಮೃತದೇಹಗಳನ್ನು ಶಿಫ್ಟ್ ಮಾಡುತ್ತಿರುವ ಬಿಎಸ್ಎಫ್ ಸಿಬ್ಬಂದಿ: ಪಿಟಿಐ ಚಿತ್ರ   

ಬೆಳಗಾವಿ: ಪಂಜಾಬ್‌ನ ಅತ್ತಾರಿ ವಾಘಾ ಗಡಿ ಬಳಿಯ ಸೇನಾ ಶಿಬಿರದಲ್ಲಿ ಭಾನುವಾರ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್)ಲ್ಲಿ ಗುಂಡಿನ ದಾಳಿ ನಡೆಸಿ ನಾಲ್ವರು ಸಹೋದ್ಯೋಗಿಗಳನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ ಯೋಧ ಸತ್ತೆಪ್ಪ ಸಿದ್ದಪ್ಪ ಕಿಲಾರಗಿ (33) ಅವರು ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಹಳೆವಂಟಮೂರಿ ಗ್ರಾಮದವರು ಎನ್ನುವ ಅಂಶ ಹೊರಬಿದ್ದಿದೆ.

‘ಆ ಯೋಧ ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯವರು ಎನ್ನುವುದು ಖಚಿತವಾಗಿದೆ. ಆದರೆ, ಅವರು ಗುಂಡಿನ ದಾಳಿ ನಡೆಸಿದ್ದು ಏಕೆ ಎಂಬಿತ್ಯಾದಿ ಮಾಹಿತಿ ನಮಗೆ ಅಧಿಕೃತವಾಗಿ ‌ಬಂದಿಲ್ಲ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಪ್ರತಿಕ್ರಿಯಿಸಿದರು.

ಸತ್ತೆಪ್ಪ ಅವರಿಗೆ ತಂದೆ, ತಾಯಿ, ಅಣ್ಣ, ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಇದ್ದಾರೆ. ಬಿ.ಇಡಿ. ಪದವೀಧರರಾಗಿದ್ದ ಅವರು, 13 ವರ್ಷಗಳ ಹಿಂದೆ ಬಿಎಸ್‌ಫ್‌ಗೆ ಕಾನ್‌ಸ್ಟೆಬಲ್‌ ಟ್ರೇಡ್ಸ್‌ಮನ್‌ ಆಗಿ ಸೇರ್ಪಡೆಯಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.