ADVERTISEMENT

ತಲ್ಲೂರ: ರಂಜಿಸಿದ ‘ಸಂಗ್ಯಾ ಬಾಳ್ಯಾ’ ಸಣ್ಣಾಟ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 14:14 IST
Last Updated 4 ನವೆಂಬರ್ 2021, 14:14 IST
ತಲ್ಲೂರ ಗ್ರಾಮದ ಪೇಟೆ ಸಭಾಭವನದಲ್ಲಿ ಮದ್ಲೂರದ ಸಿದ್ದೇಶ್ವರ ಜಾನಪದ ರಂಗ ಕಲಾವಿದರು ‘ಸಂಗ್ಯಾ ಬಾಳ್ಯಾ’ ಸಣ್ಣಾಟ ಕಾರ್ಯಕ್ರಮ ನೀಡಿದರು
ತಲ್ಲೂರ ಗ್ರಾಮದ ಪೇಟೆ ಸಭಾಭವನದಲ್ಲಿ ಮದ್ಲೂರದ ಸಿದ್ದೇಶ್ವರ ಜಾನಪದ ರಂಗ ಕಲಾವಿದರು ‘ಸಂಗ್ಯಾ ಬಾಳ್ಯಾ’ ಸಣ್ಣಾಟ ಕಾರ್ಯಕ್ರಮ ನೀಡಿದರು   

ತಲ್ಲೂರ: ‘ಗ್ರಾಮೀಣ ಕಲೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನಮ್ಮ ಕಲೆ, ಸಾಹಿತ್ಯ, ಸಂಗೀತ, ಜಾನಪದ ನಶಿಸದಂತೆ ನೋಡಿಕೊಳ್ಳಬೇಕು’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವರಾಜ ಕಡಬಿ ಹೇಳಿದರು.

ಗ್ರಾಮದ ಪೇಟೆ ಸಭಾಭವನದಲ್ಲಿ ಮಂಗಳವಾರ ರಾತ್ರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಮದ್ಲೂರ ಗ್ರಾಮದ ಸಿದ್ದೇಶ್ವರ ಜಾನಪದ ರಂಗ ಕಲಾವಿದರು ನಡೆಸಿಕೊಟ್ಟ ‘ಸಂಗ್ಯಾ ಬಾಳ್ಯಾ’ ಸಣ್ಣಾಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕಲೆಗಳನ್ನು ಉಳಿಸಿ–ಬೆಳೆಸುವ ನಿಟ್ಟಿನಲ್ಲಿ ಸರ್ಕಾರದಿಂದ ಸಹಕಾರ ಕೊಡುತ್ತಿರುವುದು ಶ್ಲಾಘನೀಯ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಸದಸ್ಯ ಶ್ರೀಮಂತ ಪ್ರಪುಲಚಂದ್ರ ದೇಸಾಯಿ, ‘ಪೌರಾಣಿಕ, ಸಾಮಾಜಿಕ ನಾಟಕಗಳು ಸಮಾಜದಲ್ಲಿ ಬದಲಾವಣೆ ತರುತ್ತವೆ. ಆದರೆ, ಪ್ರಸ್ತುತ ಟಿವಿ ಮತ್ತು ಸಾಮಾಜಿಕ ಜಾಲತಾಣಗಳ ಭರಾಟೆಯಿಂದಾಗಿ ನಾಟಕಗಳನ್ನು ನೋಡುವವರ ಸಂಖ್ಯೆ ಕ್ಷೀಣಿಸುತ್ತಿದೆ’ ಎಂದು ವಿಷಾದಿಸಿದರು.

ಕಾರ್ಯಕ್ರಮ ಜನರನ್ನು ರಂಜಿಸಿತು.

ತೋರಗಲ್ಲ ಮಠದ ದೀಪಕ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಶಂಕರಗೌಡ ಪಾಟೀಲ, ಐ.ಎಸ್. ಚಿಕಾಕಿ, ಸುಭಾನಿ ಕುದರಿ, ಬಸವರಾಜ ಕಟ್ಟೀಮನಿ, ಅಶೋಕ ದುಂಡನಕೊಪ್ಪ, ವಿನಯ ಕರಿಕಟ್ಟಿ, ಈರಪ್ಪ ಬೆನಕಟ್ಟಿ, ಶಿವಪ್ಪ ನಡವಿನಮನಿ, ಗೋಪಾಲ ವನ್ನೂರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.