ADVERTISEMENT

ಸಂಕೇಶ್ವರ | ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 5:19 IST
Last Updated 3 ಡಿಸೆಂಬರ್ 2025, 5:19 IST
ಸಂಕೇಶ್ವರದ ಎಸ್.ಡಿ.ವಿ.ಎಸ್ ಸಂಘದ ಕಾರ್ಯಾಲಯದಲ್ಲಿ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು
ಸಂಕೇಶ್ವರದ ಎಸ್.ಡಿ.ವಿ.ಎಸ್ ಸಂಘದ ಕಾರ್ಯಾಲಯದಲ್ಲಿ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು   

ಸಂಕೇಶ್ವರ: ಎಸ್.ಡಿ.ವಿ.ಎಸ್ ಸಂಘದ ಎಸ್.ಎಸ್. ಆರ್ಟ್ಸ್ ಕಾಲೇಜು ಮತ್ತು ಟಿ.ಪಿ. ಸೈನ್ಸ್ ಇನ್‌ಸ್ಟಿಟ್ಯೂಟ್ ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ಅತ್ಯುತ್ತಮ ಸಾಧನೆ ತೋರಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎ.ಬಿ. ಪಾಟೀಲ ತಿಳಿಸಿದರು.

ಸಂಘದ ಆಡಳಿತ ಕಚೇರಿಯಲ್ಲಿ ವಿದ್ಯಾರ್ಥಿಗಳನ್ನು ಸತ್ಕರಿಸಿ ಅವರು ಮಾತನಾಡಿದರು.

ಕಲಾ ವಿಭಾಗದ ವಿದ್ಯಾರ್ಥಿನಿ ಮುಶಬ್ದರಿನ್ ಕಡಲಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಚಿನ್ನದ ಪದಕ ಪಡೆದಿದ್ದಾರೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 9ನೇ ಅಂತರ ಮಹಾವಿದ್ಯಾಲಯ ಕ್ರೀಡಾಕೂಟದಲ್ಲಿ ಪ್ರಿಯಾ ಪಾಟೀಲ 5 ಸಾವಿರ ಮೀ. ಮತ್ತು 10 ಸಾವಿರ ಮೀ. ಓಟಗಳಲ್ಲಿ ಎರಡು ಚಿನ್ನದ ಪದಕ ಗೆದ್ದಿದ್ದಾರೆ. ರೋಹಿಣಿ ದುರದುಂಡಿ ಅವರು 10 ಸಾವಿರ ಮೀ. ಮತ್ತು 1,500 ಮೀ. ಓಟದ ಸ್ಪರ್ಧೆಗಳಲ್ಲಿ ಬೆಳ್ಳಿಯ ಪದಕ ಗಳಿಸಿದ್ದಾರೆ. ನೂರಜಹಾನ ಮುಜಾವರ 1,500 ಮೀ. ಓಟದಲ್ಲಿ ಚಿನ್ನ ಮತ್ತು 5 ಸಾವಿರ ಮೀ. ಓಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ADVERTISEMENT

ಸಂಸ್ಥೆಯ ಉಪಾಧ್ಯಕ್ಷ ಕೆ.ಸಿ. ಶಿರಕೋಳಿ, ನಿರ್ದೇಶಕ ವಿ.ಬಿ. ತೋಡಕರ, ಎಸ್.ಎಂ. ಪಾಟೀಲ, ಕಾರ್ಯದರ್ಶಿ ಜಿ.ಸಿ. ಕೋಟಗಿ, ಆಡಳಿತಾಧಿಕಾರಿ ಬಿ.ಎ. ಪೂಜಾರಿ, ಆರ್.ಬಿ. ಪಾಟೀಲ, ಪ್ರಾಂಶುಪಾಲ ಪಿ.ಬಿ. ಬುರ್ಜಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.