ADVERTISEMENT

ಗೋಕಾಕ್‌ ಕ್ಷೇತ್ರದ ಉಪಚುನಾವಣೆಗೆ ಲಖನ್‌ ಜತೆಗೆ ಸತೀಶ್‌ ನಾಮಪತ್ರ ಸಲ್ಲಿಕೆ!

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 11:29 IST
Last Updated 1 ಡಿಸೆಂಬರ್ 2019, 11:29 IST
   

ಬೆಳಗಾವಿ: ಗೋಕಾಕ್‌ ಕ್ಷೇತ್ರದ ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್‌ ಶಾಸಕ ಸತೀಶ್‌ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ದಾರೆ. ಆ ಮೂಲಕ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ಸಹೋದರರಮೇಶ್‌ ಜಾರಕಿಹೊಳಿ ವಿರುದ್ಧದ ಸಮರವನ್ನು ಸತೀಶ್‌ ಜಾರಕಿಹೊಳಿ ಮತ್ತಷ್ಟು ತೀವ್ರಗೊಳಿಸಿರುವುದುಮೇಲ್ನೋಟಕ್ಕೆ ಕಂಡುಬಂದಿವೆ.

ಈಗಾಗಲೇ ಗೋಕಾಕ್‌ ಕ್ಷೇತ್ರದ ಉಪಚುನಾವಣೆಗೆಬಿಜೆಪಿಯಿಂದ ರಮೇಶ್‌ ಜಾರಕಿಹೊಳಿ, ಕಾಂಗ್ರೆಸ್‌ನಿಂದ ಲಖನ್‌ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ದಾರೆ. ಒಂದೇ ಕ್ಷೇತ್ರದ ಚುನಾವಣೆಗೆ ಜಾರಕಿಹೊಳಿ ಕುಟುಂಬದ ಮೂವರು ಸಹೋದರರು ನಾಮಪತ್ರ ಸಲ್ಲಿಸಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಒಂದು ವೇಳೆ ಲಖನ್‌ ಅವರ ನಾಮಪತ್ರ ತಿರಸ್ಕೃತವಾದರೆ, ರಮೇಶ್‌ ಜಾರಕಿಹೊಳಿ ವಿರುದ್ಧ ಸತೀಶ್‌ ಅವರನ್ನು ಕಣಕ್ಕಿಳಿಸುವ ಯೋಜನೆ ಕಾಂಗ್ರೆಸ್‌ ರೂಪಿಸಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ, ಹಲವು ತಿಂಗಳಿಂದ ರಾಜ್ಯದ ಗಮನ ಸೆಳೆದಿರುವ ಗೋಕಾಕ್‌ ಕ್ಷೇತ್ರ ಮತ್ತುಷ್ಟು ರಂಗು ಪಡೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.