
ಕಾಗವಾಡ: ಮಣ್ಣಿನ ಮಡಿಕೆಯಲ್ಲಿ ಹದವಾಗಿ ಬೆಂದ ಗೆಣಸಿನಕಾಯಿ, ಮಸಾಲಯುಕ್ತ ವಡಾಪಾವ್, ಮಹಾರಾಷ್ಟ್ರದ ಕೊಲ್ಲಾಪುರಿ ಭೇಳ, ಇಡ್ಲಿ, ವಡಾ, ಪಾನಿಪುರಿ ಹೀಗೆ ವಿವಿಧ ತರಹದ ಉಪಾಹಾರದ ಘಮ ಇಡೀ ಮೇಳದ ತುಂಬ ಹರಡಿತ್ತು.
ಇಷ್ಟೆಲ್ಲ ವೈವಿಧ್ಯಮಯ ಪದಾರ್ಥಗಳು ಒಂದೇ ವೇದಿಕೆಯಲ್ಲಿ ಕಂಡು ಬಂದಿದ್ದು ಕಾಗವಾಡ ತಾಲ್ಲೂಕಿನ ಐನಾಪೂರ ಪಟ್ಟಣದ ಶಾಂತಿಸಾಗರ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ವಿಶ್ವ ಆಹಾರ ಮೇಳದ ಅಂಗವಾಗಿ ಶಾಲಾ ಆವರಣದಲ್ಲಿ ನಡೆದ ಆಹಾರಮೇಳದಲ್ಲಿ.
ಮೇಳದಲ್ಲಿ ಹಪ್ಪಳ, ಸಂಡಗಿ, ಮಸಾಲಾ ಪಾಪಡ, ಉಪ್ಪಿನಕಾಯಿ ಚೋಡಾ, ಸೇರಿದಂತೆ ಹಲವಾರು ತರಹದ ಉಪಾಹಾರ ತಯಾರಿಸಿದ್ದು, ಪಾಲಕರು, ಸಾರ್ವಜನಿಕರು ನೋಡು ನೋಡುತ್ತಲೇ ಎಲ್ಲವನ್ನು ಖರೀದಿಸಿ ಬಾಯಿ ಚಪ್ಪರಿಸಿದರು.
ಮೇಳದಲ್ಲಿ ಮೋಹನರಾವ್ ಮುತಾಲಿಕ, ಶಿಕ್ಷಣ ಇಲಾಖೆಯ ಅಧಿಕಾರಿ ಭರತ ಟೊಣಗೆ, ಸಂಸ್ಥೆಯ ಅಧ್ಯಕ್ಷ ಅರುಣ ಗಾಣಿಗೇರ ಎ.ಎಸ್.ಖೋತ, ಪಟ್ಟಣ ಪಂಚಾಯಿತಿ ಸದಸ್ಯ ಪ್ರವೀಣ ಗಾಣಿಗೇರ, ಪಾಯಪ್ಪ ಕುಡವಕ್ಕಲಗಿ,ಅನುಪ ಶೆಟ್ಟಿ, ಶಿವಾನಂದ ಕಮತಗಿ,ರಾಮು ಪಾವಲಿ, ಕಾಳಪ್ಪ ಬಡಿಗೇರ, ಅರವಿಂದ ಕಾರ್ಚಿ, ಪ್ರಕಾಶ ಗಾಣಿಗೇರ, ಮುಖ್ಯಶಿಕ್ಷಕಿ ಬಿ.ಜಿ.ಮೋಳೆಕರ,ಕವಿತಾ ದೇಸಾಯಿ, ಸರಸ್ವತಿ ದಾನೊಳ್ಳಿ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.