ಬೈಲಹೊಂಗಲ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 'ವಕ್ಫ್ ತಿದ್ದುಪಡಿ ಕಾಯ್ದೆ 2025' ಅನ್ನು ಭಾರತದ ಸಂವಿಧಾನ ಮತ್ತು ಅಲ್ಪಸಂಖ್ಯಾತರ ವಿರುದ್ಧವಾಗಿ ಅಂಗೀಕರಿಸಿ, ಇದಕ್ಕೆ ಸಕ್ಕರೆ ಹಚ್ಚಿದ ಉಮ್ಮಿದ ನೀಡಲಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಸಮಿತಿ ಸದಸ್ಯೆ ಪ್ರೊ ಸೈದಾ ಸಾದಿಯಾ ಹೇಳಿದರು.
ಪಟ್ಟಣದ ನಯಾ ಮೊಹಲ್ಲಾದ ಸುಹಾನಾ ಹಾಲನಲ್ಲಿ ನಡೆದ ಸಂವಿಧಾನ ವಿರೋಧಿ ವಕ್ಫ್ ತಿದ್ದುಪಡಿ ಕಾಯ್ದೆ 2025 ಕುರಿತು ಮಹಿಳಾ ಜಾಗೃತಿ ಸಮಾವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
ವಾಸ್ತವದಲ್ಲಿ ಉಮ್ಮಿದ ಕಾಯ್ದೆ ದೇಶದಾದ್ಯಂತ ವಕ್ಫ್ ಆಸ್ತಿಗಳನ್ನು ಲೂಟಿ ಮಾಡುವ ಮತ್ತು ವಂಚಿಸುವ ಉದ್ದೇಶದಿಂದ ತಂದಿರುವ ಒಂದು ಕಾಯ್ದೆಯಾಗಿದೆ. ವಕ್ಫ್ ನೀಡುವ ದಾನದಾತರು ಕನಿಷ್ಠ 5 ವರ್ಷಗಳಿಂದ ಪ್ರಾಯೋಗಿಕ ಮುಸ್ಲಿಮರಾಗಿರಬೇಕು ಎಂಬ ಶರತ್ತು ವಿಧಿಸಲಾಗಿದೆ.
ಕ್ಷೇತ್ರ ಸಮಿತಿ ಅಧ್ಯಕ್ಷ ಮಲಿಕಜಾನ ಮುಲ್ಲಾ ಸಭೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನಕಾರ್ಯದರ್ಶಿ ಅಬುಬಕರ್ ಖಾದ್ರಿ,ಜಿಲ್ಲಾ ಸಮಿತಿ ಸದಸ್ಯ ನಾಸೀರ ಚಾಂದಶಾ, ಮೌಲಾನಾ ಮಾಜ ಹಾಗೂ ಪಕ್ಷದ ಕಾರ್ಯಕರ್ತರು, ಸದಸ್ಯರು ಹಾಗೂ ನೂರಾರು ಮಹಿಳೆಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.