ADVERTISEMENT

ಅಥಣಿ: ‘ಪುಣ್ಯ ಪುರುಷರ ದಾರಿಯಲ್ಲಿ ನಡೆಯಿರಿ’

​ಪ್ರಜಾವಾಣಿ ವಾರ್ತೆ
Published 11 ಜನವರಿ 2020, 10:00 IST
Last Updated 11 ಜನವರಿ 2020, 10:00 IST
ಅಥಣಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕೆಎಲ್‌ಇ ಸಂಸ್ಥೆಯಿಂದ ತ್ಯಾಗವೀರ ಶಿರಸಂಗಿ ಲಿಂಗರಾಜ ಪ್ರಶಸ್ತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಬಾಳಾಸಾಬ ಲೋಕಾಪೂರ ಅವರಿಗೆ ಶುಕ್ರವಾರ ಪ್ರದಾನ ಮಾಡಲಾಯಿತು
ಅಥಣಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕೆಎಲ್‌ಇ ಸಂಸ್ಥೆಯಿಂದ ತ್ಯಾಗವೀರ ಶಿರಸಂಗಿ ಲಿಂಗರಾಜ ಪ್ರಶಸ್ತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಬಾಳಾಸಾಬ ಲೋಕಾಪೂರ ಅವರಿಗೆ ಶುಕ್ರವಾರ ಪ್ರದಾನ ಮಾಡಲಾಯಿತು   

ಅಥಣಿ: ‘ಪುಣ್ಯ ಪುರುಷರ ಭವ್ಯ ಪರಂಪರೆ, ಅವರ ಬದುಕಿನ ದಾರಿ ವಿದ್ಯಾರ್ಥಿಗಳ ಜೀವನಕ್ಕೆ ಮಾರ್ಗದರ್ಶನ ಪಥವಾಗಬೇಕು’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಾಳಾಸಾಬ ಲೋಕಾಪೂರ ಹೇಳಿದರು.

ಲಿಂಗರಾಜ ಜಯಂತ್ಯುತ್ಸವ ಸಮಿತಿ, ಕೆಎಲ್‌ಇ ಅಂಗ ಸಂಸ್ಥೆಗಳ ವತಿಯಿಂದ ಇಲ್ಲಿನ ಶಿವಯೋಗಿ ಮುರುಘೇಂದ್ರ ಸ್ವಾಮೀಜಿ ಕಾಲೇಜಿನಲ್ಲಿ ಶುಕ್ರವಾರ ನಡೆದ ತ್ಯಾಗವೀರ ಶಿರಸಂಗಿ ಲಿಂಗರಾಜರ 159ನೇ ಜಯಂತ್ಯುತ್ಸವದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ದೇಸಾಯಿಗಳ ವಾಡೆಯಲ್ಲಿಯ ಕ್ರೌರ್ಯ, ದಬ್ಬಾಳಿಕೆಯ ಸಂಸ್ಕೃತಿಯನ್ನು ಹತ್ತಿಕ್ಕಿ ಅವು ಜನಮುಖಿ, ಸಮಾಜಮುಖಿ ಹಾಗೂ ಮಹಿಳಾಮುಖಿಯಾಗಲು ಪರಿವರ್ತನೆ ಮಾಡುವಲ್ಲಿ ಶಿರಸಂಗಿ ಲಿಂಗರಾಜರ ಪರಿಶ್ರಮ ದೊಡ್ಡದು’ ಎಂದರು.

ADVERTISEMENT

ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಡಾ.ಮಹಾಂತೇಶ ಉಕ್ಕಲಿ ಮಾತನಾಡಿದರು.

ದಾನಿಗಳಾದ ಜಗದೀಶ ನೇಮಗೌಡ, ಬಸವರಾಜ ಇಟ್ನಾಳ, ಮಲ್ಲಿಕಾರ್ಜುನ ಸಂಕ ಹಾಗೂ ಎ.ಎಸ್. ಹಿರೇಮಠ ಅವರನ್ನು ಸನ್ಮಾನಿಸಲಾಯಿತು.

ಜಯಂತಿ ಅಂಗವಾಗಿ ಆಯೋಜಿಸಿದ್ದ ಭಾಷಣ ಹಾಗೂ ಗಾಯನ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು. ಕಾವ್ಯ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ಶ್ರೀನಿವಾಸ ಚೌದರಿ (ಪ್ರಾಥಮಿಕ ಶಾಲೆ), ಸಾಗರ ಸಂಕ್ರಟ್ಟಿ (‍ಪ್ರೌಢಶಾಲೆ) ಮತ್ತು ನೀಲಾಂಬಿಕಾ ಹೊನ್ನೊಳ್ಳಿ (ಕಾಲೇಜು ವಿಭಾಗ) ಹಾಡಿದರು.

ಡಾ.ಮಲ್ಲಿಕಾರ್ಜುನ ಹಂಜಿ , ಎಚ್.ಆರ್. ಚಮಕೇರಿ, ಅಲ್ಲಪ್ಪಣ್ಣ ನಿಡೋಣಿ, ಪ್ರಕಾಶ ಪಾಟೀಲ, ವಿಜಯಕುಮಾರ ಬುರ್ಲಿ, ಎಂ.ಎನ್. ಚಿಂಚೋಳಿ, ಶ್ರೀಶೈಲ ಸಂಕ, ಮಲ್ಲಿಕಾರ್ಜುನ ಕನಶೆಟ್ಟಿ ಇದ್ದರು.

ಪ್ರಾಚಾರ್ಯ ಡಾ.ಆರ್.ಎಫ್. ಇಂಚಲ ಸ್ವಾಗತಿಸಿದರು. ಡಾ.ಕೆ.ಆರ್. ಸಿದ್ದಗಂಗಮ್ಮ ಪರಿಚಯಿಸಿದರು. ಡಾ.ವಿಜಯ ಕಾಂಬಳೆ ನಿರೂಪಿಸಿದರು. ಡಾ.ಎಸ್.ವೈ. ಹೊನ್ನುಂಗುರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.