ADVERTISEMENT

ಲಿಂ. ಗಂಗಾಧರ ಸ್ವಾಮೀಜಿ ಜಯಂತಿ: ಸ್ವಾಮೀಜಿಗೆ ಬಂಗಾರ ಕಿರೀಟ ಅರ್ಪಣೆ, ಪಾದಪೂಜೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 8:02 IST
Last Updated 16 ಫೆಬ್ರುವರಿ 2026, 8:02 IST
ಬೈಲಹೊಂಗಲ ಮೂರುಸಾವಿರಮಠದ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಗುರುವಂದನಾ, ಸನ್ಮಾನ ಸಮಾರಂಭದಲ್ಲಿ ಪ್ರಭುನೀಲಕಂಠ ಸ್ವಾಮೀಜಿ ಅವರಿಗೆ ಬಂಗಾರ ಕಿರೀಟ ಅರ್ಪಿಸಿದ ಭಕ್ತರು ಪಾದಪೂಜೆ ನೆರವೇರಿಸಿದರು. ವಿವಿಧ ಮಠಾಧೀಶರು, ಗಣ್ಯರು ಹಾಜರಿದ್ದರು
ಬೈಲಹೊಂಗಲ ಮೂರುಸಾವಿರಮಠದ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಗುರುವಂದನಾ, ಸನ್ಮಾನ ಸಮಾರಂಭದಲ್ಲಿ ಪ್ರಭುನೀಲಕಂಠ ಸ್ವಾಮೀಜಿ ಅವರಿಗೆ ಬಂಗಾರ ಕಿರೀಟ ಅರ್ಪಿಸಿದ ಭಕ್ತರು ಪಾದಪೂಜೆ ನೆರವೇರಿಸಿದರು. ವಿವಿಧ ಮಠಾಧೀಶರು, ಗಣ್ಯರು ಹಾಜರಿದ್ದರು   

ಬೈಲಹೊಂಗಲ: ನಗರದ ಮೂರು ಸಾವಿರಮಠದ ಲಿಂ.ನೀಲಕಂಠ ಮಹಾ ಶಿವಯೋಗಿಶ್ವರರ ಜಾತ್ರಾ ಮಹೋತ್ಸವ, ಲಿಂ. ಗಂಗಾಧರ ಸ್ವಾಮೀಜಿ 73 ನೇ ಜಯಂತಿ ಮಹೋತ್ಸವ, ಮಹಾ ಶಿವರಾತ್ರಿ ಉತ್ಸವ ಸಮಾರಂಭದಲ್ಲಿ ಶನಿವಾರ ನಡೆದ ಖ್ಯಾತ ಗಾಯಕ ರಾಜೇಶ ಕೃಷ್ಣನ ಸಂಗೀತ ಸಂಜೆಗೆ ಕಲಾ ಪ್ರೇಕ್ಷಕರು ತಲೆದೂಗಿದರು.

ತಂಪಾದ ಇಳಿ ಸಂಜೆಯ ಹೊತ್ತಿಗೆ ಆರಂಭವಾದ ಸಂಗೀತ ಸಂಜೆ ನೀನಾದ ತಡರಾತ್ರಿಯವರೆಗೂ ಮುಂದುವರೆಯಿತು. ಆರಂಭದಲ್ಲಿ ಶ್ರೀಗಣೇಶನ ಗೀತೆ ಆರಂಭಿಸಿದ ಗಾಯಕ ರಾಜೇಶ ಕೃಷ್ಣನ ಮತ್ತು ತಂಡದ ಗಾಯಕ, ಗಾಯಕಿಯರು ನೆರೆದಿದ್ದ ಕಲಾ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿದು, ಕುಪ್ಪಳಿಸುವಂತೆ ಮಾಡಿದರು.

ವರಟ ಚಿತ್ರದ ಯಾರೋ, ಕಣ್ಣಿನಲ್ಲಿ, ಕಣ್ಣನಿಟ್ಟು, ಹುಚ್ಚ ಚಿತ್ರದ ಉಸಿರೇ, ಉಸಿರೇ, ನೂರು ಜನ್ಮಕ್ಕೂ, ನೂರಾರು ಜನ್ಮಕ್ಕೂ, ಸಂತೋಷಕ್ಕೆ, ಹಾಡು ಸಂತೋಷಕ್ಕೆ, ಯಾರೇ ನೀನೂ, ರೋಜಾ ಹೂವೇ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡು ಸೇರಿದಂತೆ ಹತ್ತಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಮನರಂಜನೆ ನೀಡಿದರು. 

ಸಂಜೆ ನಡೆದ ಗುರುವಂದನಾ ಹಾಗೂ ಸನ್ಮಾನ ಸಮಾರಂಭದಲ್ಲಿ ಶ್ರೀಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ ಅವರಿಗೆ ಭಕ್ತರು ಬಂಗಾರ ಕಿರೀಟ ಅರ್ಪಿಸಿ, ಪಾದಪೂಜೆ ಮಾಡಿ ಭಕ್ತಿ ಸಮರ್ಪಿಸಿದರು. ಹಿರಿಯ ಪತ್ರಕರ್ತರಾದ ಈಶ್ವರ ಹೋಟಿ, ಮಹಾಂತೇಶ ತುರಮರಿ, ಕಲಾವಿದ ಸಿ.ಕೆ.ಮೆಕ್ಕೇದ ಮೂರುಸಾವಿರಮಠದ ಗುರು ಪರಂಪರೆ, ಕೊಡುಗೆ ಕುರಿತು ಮಾತನಾಡಿದರು.

ಶಿವಾನಂದಮಠದ ಮಹಾದೇವ ಸರಸ್ವತಿ ಸ್ವಾಮೀಜಿ, ಹಾಸ ಮಹಾಂತ ಸ್ವಾಮೀಜಿ, ಸುಣಧೋಳಿ ಶಿವಾನಂದ ಸ್ವಾಮೀಜಿ, ಮಡಿವಾಳೇಶ್ವರಮಠದ ಮಡಿವಾಳೇಶ್ವರ ಸ್ವಾಮೀಜಿ, ಬಳಗಾನೂರ ಸಿದ್ದಬಸವ ಸ್ವಾಮೀಜಿ, ಯಡ್ರಾಮಿ ಸಿದ್ದಲಿಂಗ ಸ್ವಾಮೀಜಿ, ಮಾದನಹಿಪ್ಪರಗಿ ಅಭಿನವ ಶಿವಲಿಂಗ ಸ್ವಾಮೀಜಿ, ಚಿಕ್ಕಲಪರ್ವಿ ಸದಾಶಿವ ಸ್ವಾಮೀಜಿ, ನಿಡಗುಂದಿಕೊಪ್ಪ ಅಭಿನವ ಚನ್ನಬಸವ ಸ್ವಾಮೀಜಿ, ಸತ್ತಿಗೇರಿ ಚಂದ್ರಶೇಖರ ಸ್ವಾಮೀಜಿ, ನರೇಂದ್ರ ಸಂಗಮೇಶ್ವರ ಸ್ವಾಮೀಜಿ, ಮೈಸೂರ ನಿರಂಜ ದೇವರು, ತಾರಿಹಾಳ ಅಡವಿಶೇಸ್ವರ ದೇವರು, ಬೈಲವಾಡ, ಶಂಕರ ದೇವರು ವೇದಿಕೆಯಲ್ಲಿ ಇದ್ದರು.

ಮುಖಂಡರಾದ ಪ್ರಕಾಶ ಮೂಗಬಸವ, ನಾನಾಸಾಹೇಬ ಪಾಟೀಲ, ಸೋಮನಾಥ ಸೊಪ್ಪಿಮಠ, ಸುನೀಲ ಮರಕುಂಬಿ, ಶಿವಾನಂದ ಬಡ್ಡಿಮನಿ, ರಾಜು ಜನ್ಮಟ್ಟಿ, ಶಿವಾನಂದ ಬೆಳಗಾವಿ, ರಾಜು ಕುಡಸೋಮಣ್ಣವರ, ಕಾರ್ತಿಕ ಪಾಟೀಲ, ಅನೇಕರು ವೇದಿಕೆಯಲ್ಲಿ ಇದ್ದರು.

ಬೈಲಹೊಂಗಲ ಮೂರುಸಾವಿರಮಠದ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಗುರುವಂದನಾ ಸನ್ಮಾನ ಸಮಾರಂಭದಲ್ಲಿ ಗಾಯಕ ರಾಜೇಶ ಕೃಷ್ಣನ ತಂಡದಿಂದ ಸಂಗೀತ ಸಂಜೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.