ADVERTISEMENT

ಬೈಲಹೊಂಗಲ: ಮುಚ್ಚುವ ಭೀತಿಯಲ್ಲಿ ಸೊಗಲ ಜಿಂಕೆವನ

ಕ್ಷೀಣಿಸಿದ ಪ್ರವಾಸಿಗರ ಸಂಖ್ಯೆ, ಅರಣ್ಯ ಇಲಾಖೆಗೆ ನಿರ್ವಹಣೆಯ ಭಾರ

ಪ್ರಜಾವಾಣಿ ವಿಶೇಷ
Published 13 ಆಗಸ್ಟ್ 2023, 4:47 IST
Last Updated 13 ಆಗಸ್ಟ್ 2023, 4:47 IST
ಬೈಲಹೊಂಗಲ ಸಮೀಪದ ಸುಕ್ಷೇತ್ರ ಸೊಗಲ ಸೋಮೇಶ್ವರ ದೇವಸ್ಥಾನದಲ್ಲಿರುವ ಜಿಂಕೆ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿದ್ದು ಹೀಗೆ.
ಬೈಲಹೊಂಗಲ ಸಮೀಪದ ಸುಕ್ಷೇತ್ರ ಸೊಗಲ ಸೋಮೇಶ್ವರ ದೇವಸ್ಥಾನದಲ್ಲಿರುವ ಜಿಂಕೆ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿದ್ದು ಹೀಗೆ.   

ರವಿಕುಮಾರ ಎಂ.ಹುಲಕುಂದ

ಬೈಲಹೊಂಗಲ: ಸುಕ್ಷೇತ್ರ ಸೊಗಲ ಸೋಮೇಶ್ವರ ದೇವಸ್ಥಾನ ಆವರಣದಲ್ಲಿರುವ, ಪ್ರವಾಸಿಗರ ಆಕರ್ಷಣೀಯ ತಾಣವಾದ ಕಿರು ಪ್ರಾಣಿ ಸಂಗ್ರಹಾಲಯ ಜಿಂಕೆವನವು ಇದೀಗ ಮುಚ್ಚುವ ಭೀತಿಯಲ್ಲಿದೆ.

ದೇವಸ್ಥಾನ ಪಕ್ಕದಲ್ಲಿ ಕಾಡಿಗೆ ಹೊಂದಿಕೊಂಡು 1987ರಲ್ಲಿ ಜಿಂಕೆವನ ನಿರ್ಮಿಸಲಾಗಿದೆ. ಮೂರು ದಶಕಗಳ ಇತಿಹಾಸ ಇರುವ ಹೊಂದಿರುವ ಜಿಂಕೆವನದಲ್ಲಿ ಒಂದು ಕೃಷ್ಣಮೃಗ, 30 ಜಿಂಕೆಗಳಿವೆ.

ADVERTISEMENT

ನಿರ್ವಹಣೆ ಭಾರದಿಂದ ಜಿಂಕೆವನ ಮುಂದುವರಿಸದಿರಲು ಅರಣ್ಯ ಇಲಾಖೆ ನಿರ್ಧರಿಸಿದೆ. ಕೆಲ ವರ್ಷಗಳಲ್ಲಿ ಮಳೆ ಕೈಕೊಟ್ಟು ಅಕ್ಕಪಕ್ಕದ ಪ್ರದೇಶಗಳಲ್ಲಿ ಕೊಳವೆ ಬಾವಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಝರಿಗಳು ಕ್ಷಿಣಿಸಿವೆ. ಮದುವೆ ಸಮಾರಂಭಗಳೂ ಇಲ್ಲಿ ನಿಂತು ಹೋಗಿವೆ. ಜಿಂಕೆ ವನಕ್ಕೂ ನೀರಿನ ಮೂಲ ಇಲ್ಲದಾಗಿದೆ. ಇದರ ನಿರ್ವಹಣೆಗೆ ಹೆಚ್ಚಿನ ಹಣದ ಬೇಕಿದ್ದು, ಪ್ರವಾಸೋದ್ಯಮ ಆದಾಯ ಕ್ಷೀಣಿಸಿದ್ದರಿಂದ ಅರಣ್ಯ ಇಲಾಖೆ ಈ ನಿರ್ಧಾರಕ್ಕೆ ಮುಂದಾಗಿದೆ.

ದಕ್ಷೀಣ ಕಾಶಿ ಎಂದೇ ಹೆಸರಾಗಿರುವ ಸೊಗಲಕ್ಕೆ ರಾಜ್ಯವಷ್ಟೇ ಅಲ್ಲದೆ, ಮಹಾರಾಷ್ಟ್ರ, ಗೋವಾ ಸೇರಿದಂತೆ ಬೇರೆ, ಬೇರೆ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದರು. ಜಿಂಕೆ ವನದಲ್ಲಿ ಸುತ್ತಾಡಿ, ವನ್ಯ ಜೀವಿಗಳನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆಗ ಅರಣ್ಯ ಇಲಾಖೆಗೆ ಜಿಂಕೆವನದಿಂದ ಉತ್ತಮ ಆದಾಯ ಬರುತ್ತಿತ್ತು. ಆದರೆ, ಕೊರೊನಾ ಬಳಿಕ ಪ್ರವಾಸಿಗರ ಕೊರತೆ ಎದುರಾಗಿದೆ. ನಿತ್ಯ ಬೆರಳೆಣಿಕೆಯಷ್ಟೇ ಜನರು ಮಾತ್ರ ಭೇಟಿ ನೀಡುತ್ತಿದ್ದಾರೆ.

ಜಿಂಕೆವನವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಬೇಕಿದೆ. ಈ ಕಾರ್ಯಕ್ಕೆ ಅರಣ್ಯ ಇಲಾಖೆ ಜೊತೆಗೆ ಪ್ರವಾಸೋದ್ಯಮ ಇಲಾಖೆ ಕೈಜೋಡಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಬೈಲಹೊಂಗಲ ಸಮೀಪದ ಸುಕ್ಷೇತ್ರ ಸೊಗಲ ಸೋಮೇಶ್ವರ ದೇವಸ್ಥಾನದಲ್ಲಿರುವ ಜಿಂಕೆ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿದ್ದು ಹೀಗೆ.
ಬೈಲಹೊಂಗಲ ಸಮೀಪದ ಸುಕ್ಷೇತ್ರ ಸೊಗಲ ಸೋಮೇಶ್ವರ ದೇವಸ್ಥಾನದಲ್ಲಿರುವ ಜಿಂಕೆವನ.
ಜಿಂಕೆವನ ಪುನಶ್ಚೇತನಕ್ಕೆ ಅದೇ ಜಾಗದಲ್ಲಿ ಪಕ್ಷಿಧಾಮ ನಿರ್ಮಿಸುವ ಕುರಿತಂತೆ ಪರಿಶೀಲಿಸುವುದಾಗಿ ಅರಣ್ಯ ವನ್ನಜೀವಿ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೇ ಈಗಾಗಲೇ ಭರವಸೆ ನೀಡಿದ್ದಾರೆ‌.
–ಮಹಾಂತೇಶ ಕೌಜಲಗಿ, ಶಾಸಕರು
ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ ಜಿಂಕೆವನಕ್ಕೆ ಅಗತ್ಯ ಸೌಲಭ್ಯ ಒದಗಿಸಿ ಮುಂದುವರಿಸಿಕೊಂಡು ಹೋಗಬೇಕು. ಯಾವುದೇ ಕಾರಣಕ್ಕೂ ಮುಚ್ಚಬಾರದು
–ವೀರನಗೌಡ ಸಂಗನವರ ಗ್ರಾಮಸ್ಥರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.