ADVERTISEMENT

8ನೇ ವರ್ಷದ ಶ್ರೀಶೈಲ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2025, 15:27 IST
Last Updated 5 ಮಾರ್ಚ್ 2025, 15:27 IST

ಮುನವಳ್ಳಿ: ಕಟಕೋಳ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆ ಸಮಿತಿಯವರಿಂದ ಮಾರ್ಚ್‌ 13 ರಂದು ವೀರಭದ್ರೇಶ್ವರ ದೇವಸ್ಥಾನದಿಂದ ಸಂಜೆ 5 ಗಂಟೆಗೆ ಶ್ರೀಶೈಲ ಕ್ಷೇತ್ರಕ್ಕೆ 8ನೇ ವರ್ಷದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ಅಂದು ರಾತ್ರಿ ಗೊಡಚಿ ರಾಮು ಅಜ್ಜನವರ ದೇವಸ್ಥಾನದಲ್ಲಿ ವಾಸ್ತವ್ಯ. ಬೆಳಿಗ್ಗೆ ಗೊಡಚಿಯಿಂದ ಹೊರಟು ಸಾಲಹಳ್ಳಿ, ಲೋಕಾಪುರ, ಕಲಾದಗಿ ಮಾರ್ಗವಾಗಿ ತುಳಸಿಗೇರಿ, ಗದ್ದನಕೇರಿ ಕ್ರಾಸ್‌, ಬಾಗಲಕೋಟೆ ಮೂಲಕ ಆಂಧ್ರಪ್ರದೇಶಕ್ಕೆ ಹೋಗಲಾಗುವುದು. ಮಾರ್ಚ್‌ 25 ರಂದು ಶ್ರೀಶೈಲ ತಲುಪುವ ಯೋಜನೆ ಹಾಕಿಕೊಳ್ಳಲಾಗಿದೆ.

ಪಾದಯಾತ್ರೆಯಲ್ಲಿ ಭಾಗವಹಿಸುವವರು ಚನ್ನಪ್ಪ ಪಟ್ಟಣಶೆಟ್ಟಿ 9740427125, ಈರಪ್ಪ ತೋಲಗಿ 9902483734 ಸಂಪರ್ಕಿಸಿ. ಹೆಸರು ನೋಂದಾಯಿಸಲು ಮಾರ್ಚ್‌ 12 ಕೊನೆಯ ದಿನ ಎಂಧು ಶ್ರೀಶೈಲ ಪಾದಯಾರ್ತೆ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.