
ಹುಕ್ಕೇರಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರ್ಕಾರವು ಕಡಿಮೆ ವೆಚ್ಚದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿದ್ದು, ವಿದ್ಯಾರ್ಥಿಗಳು ಸೌಲಭ್ಯದ ಸದುಪಯೋಗ ಪಡೆದು ಉತ್ತಮ ಫಲಿತಾಂಶ ಪಡೆದು ಕಾಲೇಜಿಗೆ ಮತ್ತು ತಂದೆ ತಾಯಿಗೆ ಕೀರ್ತಿ ತಂದು ಕೊಡಿ ಎಂದು ಚಿಕ್ಕೋಡಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಿ.ಐ.ಭಂಡಾರೆ ಹೇಳಿದರು.
ಮಂಗಳವಾರ ಸ್ಥಳೀಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡ ಬೀಳ್ಕೊಡುವ ಸಮಾರಂಭ, ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ನಿವೃತ್ತ ಉಪನ್ಯಾಸಕರಿಗೆ ಸತ್ಕಾರ ಸಮಾರಂಭ ಉದ್ಧೇಶಿಸಿ ಮಾತನಾಡಿದರು.
ಸಿಡಿಸಿ ಉಪಾಧ್ಯಕ್ಷ ಬಿ.ಎಸ್.ಮಗದುಮ್ಮ, ಎಸ್.ಎಸ್.ಎನ್.ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಿಡಿಸಿ ಸದಸ್ಯ ಪಿ.ಜಿ.ಕೊಣ್ಣೂರ್, ನಿವೃತ್ತ ಉಪನ್ಯಾಸಕ ಪ್ರಮೋದ ನಾಯ್ಕ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಪ್ರಾಚಾರ್ಯ ಎಂ.ಎನ್.ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸತ್ಕಾರ: ನಿವೃತ್ತ ಉಪನ್ಯಾಸಕ ಐ.ಡಿ.ಜಕಾತಿ, ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಶಿಲ್ಪಾ ನಿಪನ್ಯಾಳಿ, ಸುಹಾಸಿನಿ ಪಾಟೀಲ್, ಪೂಜಾ ಬಾಳಿಕಾಯಿ, ಉಪನ್ಯಾಸಕರಾದ ಪ್ರತಿಜ್ಞಾ ಜೈನ್, ರಾಜಶ್ರೀ ಖೆಮಾಳೆ, ಶ್ವೇತಾ ಬೆಳಗುಂದಿ, ಪ್ರಶಾಂತ ಮಜಲಟ್ಟಿ ಮತ್ತು ಸವಿತಾ ಕೊಣ್ಣುರ್ ಅವರನ್ನು ಸತ್ಕರಿಸಲಾಯಿತು.
ಅನಿಸಿಕೆ: ವಿದ್ಯಾರ್ಥಿಗಳಾದ ಐಮನ್ ಮಕಾನದಾರ್, ಹಾಲಪ್ಪ ಕಂಕನವಾಡಿ, ಶಿವಾಣಿ ಮಸರಗುಪ್ಪಿ ಮತ್ತು ಉಪನ್ಯಾಸಕ ಎ.ಎಂ.ಬಾಗೇವಾಡಿ ಅನಿಸಿಕೆ ವ್ಯಕ್ತಪಡಿಸಿದರು.
ಸಿಡಿಸಿ ಸದಸ್ಯರಾದ ಸವಿತಾ ಏಣಗಿಮಠ, ಸಲಿಂ ನದಾಫ, ಅಶೋಕ ಕುಂಬಾರ, ಪ್ರಾಧ್ಯಾಪಕರಾದ ಹತ್ತರಗಿ ಎ.ಐ. ತಳವಾರ, ಮಕಾನದಾರ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.
ನಂದಿನಿ ಬಡಿಗೇರ ಪ್ರಾರ್ಥಿಸಿದರು. ಪ್ರೊ ಆರ್.ಬಿ.ಪಾಟೀಲ್ ಸ್ವಾಗತಿಸಿ ಪರಿಚಯಿಸಿದರು. ಪ್ರೊ ರಾಘವೇಂದ್ರ ಕುರಣಿ ನಿರೂಪಿಸಿದರು. ಪ್ರೊ ಪ್ರಸಾದ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.