ADVERTISEMENT

ಸಮರ್ಪಕ ಬಸ್ ಸೌಲಭ್ಯಕ್ಕಾಗಿ ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 14:09 IST
Last Updated 6 ಫೆಬ್ರುವರಿ 2021, 14:09 IST
ಮುಗಳಖೋಡದಲ್ಲಿ ಸಮರ್ಪಕ ಬಸ್ ಸೌಲಭ್ಯಕ್ಕಾಗಿ ಆಗ್ರಹಿಸಿ ಶನಿವಾರ ಪ್ರತಿಭಟಿಸಿದ ವಿದ್ಯಾರ್ಥಿ, ವಿದ್ಯಾರ್ಥಿನೀಯರಿಗೆ ರಾಯಬಾಗ ಸಾರಿಗೆ ಘಟಕದ ವ್ಯವಸ್ಥಾಪಕ ಎ.ಆರ್. ಚಬ್ಬಿ ಭರವಸೆ ಪತ್ರ ನೀಡಿದರು
ಮುಗಳಖೋಡದಲ್ಲಿ ಸಮರ್ಪಕ ಬಸ್ ಸೌಲಭ್ಯಕ್ಕಾಗಿ ಆಗ್ರಹಿಸಿ ಶನಿವಾರ ಪ್ರತಿಭಟಿಸಿದ ವಿದ್ಯಾರ್ಥಿ, ವಿದ್ಯಾರ್ಥಿನೀಯರಿಗೆ ರಾಯಬಾಗ ಸಾರಿಗೆ ಘಟಕದ ವ್ಯವಸ್ಥಾಪಕ ಎ.ಆರ್. ಚಬ್ಬಿ ಭರವಸೆ ಪತ್ರ ನೀಡಿದರು   

ಮುಗಳಖೋಡ: ‘ಮುಗಳಖೋಡ, ಪಾಲಬಾವಿ, ಸುಲ್ತಾನಪೂರ, ಕಪ್ಪಲಗುದ್ದಿ ಹಾಗೂ ಹಂದಿಗುಂದ ಗ್ರಾಮಗಳಿಂದ ಹಾರೂಗೇರಿ ಹಾಗೂ ರಾಯಬಾಗದ ಶಾಲಾ–ಕಾಲೇಜುಗಳಿಗೆ ವ್ಯಾಸಂಗಕ್ಕಾಗಿ ಹೋಗುವ ನಮಗೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದೆ ತುಂಬಾ ತೊಂದರೆ ಆಗುತ್ತಿದೆ’ ಎಂದು ವಿದ್ಯಾರ್ಥಿಗಳು ತಿಳಿಸಿದರು.

ಶನಿವಾರ ಇಲ್ಲಿನ ಬಸ್ ನಿಲ್ದಾಣದ ಬಳಿಯ ಸಂಗೊಳ್ಳಿರಾಯಣ್ಣ ವೃತ್ತದಲ್ಲಿ ರಸ್ತೆ ತಡೆದು ಅವರು ಪ್ರತಿಭಟಿಸಿದರು.

ಮೂರು ತಾಸು ಪ್ರತಿಭಟಿಸಿದ ಅವರು ಸಾರಿಗೆ ನಿಗಮದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸ್ಥಳಕ್ಕೆ ಬಂದ ಹಾರೂಗೇರಿ ಠಾಣೆ ಪಿಎಸ್‌ಐ ಯಮನಪ್ಪ ಮಾಂಗ ಮನವೊಲಿಕೆಗೆ ವಿದ್ಯಾರ್ಥಿಗಳು ಜಗ್ಗಲಿಲ್ಲ. ರಾಯಬಾಗ ಸಾರಿಗೆ ಘಟಕದ ವ್ಯವಸ್ಥಾಕ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು.

‘ಮುಂಜಾನೆ 6.30ಕ್ಕೆ ಹಂದಿಗುಂದ, ಸುಲ್ತಾನಪೂರ, ಪಾಲಬಾವಿ, ಮುಗಳಖೋಡ ಹಾಗೂ ಹಿಡಕಲ್ ಮಾರ್ಗವಾಗಿ ಹಾರೂಗೇರಿಗೆ 7.20ಕ್ಕೆ ತಲುಪುವಂತೆ ಬಸ್ ಕಾರ್ಯಾಚರಣೆ ನಡೆಸುವಂತೆ ಲಿಖಿತ ಭರವಸೆ ನೀಡಬೇಕು’ ಎಂದು ಆಗ್ರಹಿಸಿದರು.

ರಾಯಬಾಗ ಸಿಪಿಐ ಕೆ.ಎಸ್. ಹಟ್ಟಿ ಅವರ ಸಲಹೆಯಂತ ಸ್ಥಳಕ್ಕೆ ಬಂದ ಘಟಕ ವ್ಯವಸ್ಥಾಪಕ ಎ.ಆರ್. ಚಬ್ಬಿ, ಬೇಡಿಕೆ ಈಡೇರಿಸುವ ಕುರಿತು ಪತ್ರ ನೀಡಿದರು. ‘ಸೋಮವಾರದಿಂದಲೇ ಕಾರ್ಯಾಚರಣೆ ನಡೆಸಲಾಗುವುದು’ ಎಂದು ತಿಳಿಸಿದರು.

ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.

ನಂದೇಶ ಗೊಲಬಾವಿ, ಸಮ್ಮೇದ ಅಲಗೂರ, ಸಿದ್ರಾಮ ತಳವಾರ, ಪ್ರಿಯಾಂಕಾ ಬಳಿಗಾರ, ಸ್ನೇಹ ಹೊಸಪೇಟೆ, ರಷ್ಮಿ ಬಳಿಗಾರ, ಶಿಲ್ಪಾ ತಳವಾರ, ಪ್ರತಿಭಾ ಕಾಡಶಟ್ಟಿ, ಐಶ್ವರ್ಯ ಕಮತಗಿ, ಅನುಶಾ ಕಮತಗಿ, ಲೋಹಿತ ಕೊಟಿನತೋಟ ಬಾಳು, ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಮೇಶ ಖೇತಗೌಡರ, ಕಾಂತುಗೌಡ ಖೇತಗೌಡರ, ಮಹಾಂತೇಶ ಯರಡತ್ತಿ ಹಾಗೂ ಶ್ರೀಪಾಲ ಕುರಬಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.