ಹುಕ್ಕೇರಿ: ತಮ್ಮ ವಿರೋಧಿ ಬಣದವರು ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ನಷ್ಟದ ಲೆಕ್ಕ ಕೇಳುವುದು ಸರಿ. ಅದಕ್ಕೆ ನಾನು ಉತ್ತರಿಸಿದ್ದೇನೆ. ಆದರೆ, ನಿಪ್ಪಾಣಿ ಸಕ್ಕರೆ ಕಾರ್ಖಾನೆಯು ಐದು ವರ್ಷದಲ್ಲಿ (ಜೆ ಹಿಡಿತಕ್ಕೆ ಬಂದ ಮೇಲೆ) ₹1,100 ಕೋಟಿ ನಷ್ಟ ಅನುಭವಿಸುತ್ತಿದೆ. ಜತೆಗೆ ಗೋಕಾಕದ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮೊದಲು ಯಾರ ಕೈಯಲ್ಲಿ ಇತ್ತು. ಮತ್ತು ಈಗ ಯಾರಿಗೆ ಕೊಟ್ಟಿದ್ದಾರೆ ಎಂಬುದನ್ನು ಜನರಿಗೆ ತಿಳಿಸಿಬೇಕು. ಕೇವಲ ಅಪಪ್ರಚಾರ ಮಾಡುವುದರಿಂದ ಏನನ್ನೂ ಸಾಧಿಸಲು ಅಸಾಧ್ಯ ಎಂದು ಶಾಸಕ ನಿಖಿಲ್ ಕತ್ತಿ ಕಿಡಿಕಾರಿದರು.
ಪಟ್ಟಣದ ವಿವಿಧ ಬಡಾವನೆಗಳಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಪ್ರಚಾರ ಸಭೆಗಳಲ್ಲಿ ಸಂಘದ ಸದಸ್ಯರನ್ನು ಉದ್ಧೇಶಿಸಿ ಬುಧವಾರ ಮಾತನಾಡಿದರು.
ಸಂಘದ ವತಿಯಿಂದ ಸಂಪರ್ಕ ಕಲ್ಪಿಸುತ್ತಿರುವ ವ್ಯವಸ್ಥೆಯ ಬಗ್ಗೆ ಏನೂ ತಿಳಿಯದೆ, ನಿರಂತರ ಜ್ಯೋತಿ ಯೋಜನೆ ಅಡಿ ಜನರಿಂದ ಅರ್ಧ ಹಣ ಪಡೆದು ಸಂಪರ್ಕ ಕಲ್ಪಿಸುತ್ತಿರುವುದು ರೈತರಿಗೆ ಮಾಡಿದ ಅನ್ಯಾಯ ಎಂದರು.
ಪೈಲಟ್ ಯೋಜನೆ ಕುರಿತು 2022ರಲ್ಲಿ ದಿ.ಉಮೇಶ್ ಕತ್ತಿ ಅವರು ಸರ್ಕಾರಕ್ಕೆ ₹44 ಕೋಟಿಯ ಪ್ರಸ್ತಾವಣೆ ಸಲ್ಲಿಸಿದ್ದರು. ಈಗ ಸರ್ಕಾರದ ಬಳಿ ರಸ್ತೆ ತಗ್ಗು ತುಂಬಲು ಹಣವಿಲ್ಲ ಎಂದು ಕಿಡಿಕಾರಿದರು.
ಮುಖಂಡ ವಿನಯಗೌಡ ಪಾಟೀಲ್ ಮಾತನಾಡಿ, ತಾಲ್ಲೂಕಿನ ಸಹಕಾರಿ ಸಂಸ್ಥೆಗಳನ್ನು ದಿ.ಅಪ್ಪಣಗೌಡ ಪಾಟೀಲ್ ಸ್ಥಾಪಿಸಿ ಬೆಳೆಸಿದ್ದರು. ಅವರ ಅನುಯಾಯಿಗಳಾದ ಕತ್ತಿ ಮತ್ತು ಪಾಟೀಲ್ ಕುಟುಂಬಗಳು ಅವುಗಳನ್ನು ಉಳಿಸಿ ಬೆಳೆಸಿಕೊಂಡು ಬಂದಿವೆ. ವಿರೋಧಿ ಬಣದವರು ಸಂಸ್ಥೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವುದಕ್ಕೆ ಜನರು ಮರುಳಾಗಬೇಡಿ ಎಂದು ವಿನಂತಿಸಿದ ಅವರು ತಮ್ಮ ಸ್ವಾಭಿಮಾನದ ಪೆನಲ್ ಬೆಂಬಲಿಸುವಂತೆ ಮನವಿ ಮಾಡಿದರು. ಸ್ಥಳೀಯ ಮುಖಂಡರು ಕತ್ತಿ ಮತ್ತು ಪಾಟೀಲ್ ಪೆನಲ್ ಬೆಂಬಲಿಸುವಂತೆ ಮನವಿ ಮಾಡಿದರು.
ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯ ಚೇರಮನ್ ಮಹಾವೀರ ನಿಲಜಗಿ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ರೇಖಾ ಚಿಕ್ಕೋಡಿ, ಸ್ವಾಭಿಮಾನಿ ಸಂಘದ ಸಂಘಟಕ ಸಂಜಯ ನಿಲಜಗಿ, ಯುವ ಘಟಕದ ಅಧ್ಯಕ್ಷ ಪ್ರಜ್ವಲ್ ನಿಲಜಗಿ, ಪಿಕೆಪಿಎಸ್ ಅಧ್ಯಕ್ಷ ಎ.ಕೆ.ಪಾಟೀಲ್, ಮಲ್ಲಪ್ಪ ಬಿಸಿರೊಟ್ಟಿ, ಬಸು ಗಂಗನ್ನವರ, ರಾಜು ಚೌಗಲಾ, ಸುಭಾಸ ಜೊಂಡ, ಬಸವರಾಜ ಪಾಟೀಲ್, ಪಿಂಟು ಶೆಟ್ಟಿ, ವಾಗ್ದೇವಿ ತಾರಳಿ, ಚನ್ನಪ್ಪ ಗಜಬರ್, ರಮೇಶ್ ಬೋಳೆಗಾಂವ್, ರಾಯಪ್ಪ ಡೂಗ್, ರಾಜು ಮುನ್ನೋಳಿ, ಶಹಜಾನ ಬಡಗಾಂವಿ, ಅಪ್ಪುಶ್ ತುಬಚಿ, ರಾಜು ಮೊಮಿನದಾದಾ, ಪರಕನಟ್ಟಿ, ಜಿರಲಿ, ಸುರೇಶ್ ಜಿನರಾಳಿ, ಇಲಿಯಾಸ ಅತ್ತಾರ ಸೇರಿದಂತೆ ನೂರಾರು ಜನರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.