ADVERTISEMENT

ಟ್ಯೂಷನ್‌ ಶಿಕ್ಷಕಿಯ ಜತೆಗೆ ಸಲುಗೆ ಬೆಳೆಸ ₹13.5 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 5 ಮೇ 2025, 16:03 IST
Last Updated 5 ಮೇ 2025, 16:03 IST
<div class="paragraphs"><p>ವಂಚನೆ</p></div>

ವಂಚನೆ

   

ಬೆಳಗಾವಿ: ಶಿಕ್ಷಕಿಯೊಂದಿಗೆ ಸಲುಗೆ ಬೆಳೆಸಿಕೊಂಡ ಪಾಲಕರೊಬ್ಬರು, ವಿಡಿಯೊ ಕಾಲ್‌ನಲ್ಲಿ ಮಾತನಾಡಿ ಅದರ ದಾಖಲೆಗಳನ್ನು ಇಟ್ಟುಕೊಂಡು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಈಗಾಗಲೇ ₹7.75 ಲಕ್ಷ ಹಣ ಹಾಗೂ ₹5 ಲಕ್ಷ ಮೌಲ್ಯದ ಚಿನ್ನಾಭವರಣ ಕೂಡ ಕಿತ್ತುಕೊಂಡಿದ್ದಾನೆ.

ರಾಯಬಾಗ ತಾಲ್ಲೂಕಿನ ದಾವನಕಟ್ಟಿ ಗ್ರಾಮದ ಶಿವನಾಯಕ ಯಳ್ಳೂರೆ ಆರೋಪಿ. ಈ ಬಗ್ಗೆ ಇಲ್ಲಿನ ಜಿಲ್ಲಾ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ADVERTISEMENT

ಆರೋಪಿ ಶಿವನಾಯಕ ಅವರು ತಮ್ಮ 5ನೇ ತರಗತಿ ಓದುತ್ತಿದ್ದ ಮಗಳನ್ನು ಟ್ಯೂಷನ್‌ಗೆ ಹಚ್ಚಿದ್ದ. ಟ್ಯೂಷನ್‌ ಹೇಳುತ್ತಿದ್ದ ಶಿಕ್ಷಕಿಯ ಮೊಬೈಲ್‌ ನಂಬರ್‌ ಇಟ್ಟುಕೊಂಡು ಅವರೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದ. ಶಿಕ್ಷಕಿ ಕೂಡ ತಮ್ಮ ಕೌಟುಂಬಿಕ ಸಮಸ್ಯೆಗಳನ್ನು ಹಂಚಿಕೊಂಡಿದ್ದರು. ಆರೋಪಿ ಆಗಾಗ ವಿಡಿಯೊ ಕಾಲ್‌ ಮಾಡಿ ರೆಕಾರ್ಡ್‌ ಮಾಡಿಕೊಂಡಿದ್ದ. ಅದನ್ನು ಇಟ್ಟುಕೊಂಡು ₹15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. ಶಿಕ್ಷಕಿಯ ಪತಿಗೂ ಕರೆ ಮಾಡಿ ಹಣ ಕೇಳಿದ್ದ. ಹಣ ಕೊಡದೇ ಇದ್ದರೆ ವಿಡಿಯೊ ಕಾಲ್‌ನ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಬೆದರಿಕೆ ಹಾಕಿದ್ದ.

2024ರ ಏಪ್ರಿಲ್‌ನಿಂದ ಇಲ್ಲಿಯರೆಗೆ ₹13.75 ಲಕ್ಷದ ವಸ್ತುಗಳನ್ನು ಶಿಕ್ಷಕಿ ನೀಡಿದ್ದಾರೆ. ವಿಷಯ ಶಿಕ್ಷಕಿಯ ಮೈದುನನಿಗೆ ಗೊತ್ತಾದ ಬಳಿಕ, ಪ್ರಕರಣ ಠಾಣೆ ಮೆಟ್ಟಿಲೇರಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.