ADVERTISEMENT

ಹುಕ್ಕೇರಿ: ವಟ ಸಾವಿತ್ರಿ ವೃತ ಆಚರಣೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 13:31 IST
Last Updated 10 ಜೂನ್ 2025, 13:31 IST
ಹುಕ್ಕೇರಿ ಪಟ್ಟಣದ ಬೈಪಾಸ್ ಬಳಿಯ ಲಕ್ಷ್ಮೀ ಮಂದಿರದ ಆವರಣದಲ್ಲಿನ ಅರಳಿ ಮರಕ್ಕೆ ಮಹಿಳೆಯರು ನೂಲು ಸುತ್ತುವ ಮೂಲಕ ವಟ ಸಾವಿತ್ರಿ ವೃತ ಮಂಗಳವಾರ ಆಚರಿಸಿದರು.
ಹುಕ್ಕೇರಿ ಪಟ್ಟಣದ ಬೈಪಾಸ್ ಬಳಿಯ ಲಕ್ಷ್ಮೀ ಮಂದಿರದ ಆವರಣದಲ್ಲಿನ ಅರಳಿ ಮರಕ್ಕೆ ಮಹಿಳೆಯರು ನೂಲು ಸುತ್ತುವ ಮೂಲಕ ವಟ ಸಾವಿತ್ರಿ ವೃತ ಮಂಗಳವಾರ ಆಚರಿಸಿದರು.   

ಹುಕ್ಕೇರಿ: ಪಟ್ಟಣದಲ್ಲಿ ಮಂಗಳವಾರ ಅರಳಿ ಮರಕ್ಕೆ ನೂಲು ಸುತ್ತುವುದರ ಮೂಲಕ ಶ್ರದ್ಧಾ ಭಕ್ತಿಯಿಂದ ಮುತ್ತೈದೆಯರು ವಟ ಸಾವಿತ್ರಿ ವೃತ ಆಚರಿಸಿದರು.

ತಮ್ಮ ಗಂಡಂದಿರ ವಯಸ್ಸು ಹೆಚ್ಚಾಗಲೆಂದು ದಿನವಿಡಿ ಉಪವಾಸವಿದ್ದು, ಮುತ್ತೈದೆಯರು ಕರಿಮಣಿ, ಎಲೆ, ಅಡಿಕೆ, ಅರಿಷಿಣ, ಬಾಳೆಹಣ್ಣು, ಕಡಲೆಕಾಳು ಸಮೇತ ಮಹಿಳೆಯರಿಗೆ ಉಡಿ ತುಂಬಿ ಆರತಿ ಬೆಳಗಿ ನಮಸ್ಕರಿಸಿದರು.

ಪಟ್ಟಣದಲ್ಲಿ ಕೆಲವೊಂದು ಜನರು ಬುಧವಾರ ವಟ ಸಾವಿತ್ರಿ ವೃತ ಆಚರಿಸಲಿದ್ದಾರೆ. ಏಕೆಂದರೆ ವೃತವು ಎರಡು ದಿನ ಬಂದಿದೆ ಎಂದು ಬಸವ ನಗರ ನಿವಾಸಿ ಮಹಾದೇವಿ ಕಾಂಬಳೆ ಹೇಳಿದರು. ಕೆಲವೊಂದು ಮಹಿಳೆಯರು ವೃತವನ್ನು ಪಂಚಾಂಗದ ಪ್ರಕಾರ ಆಚರಿಸುವರು.

ADVERTISEMENT

ಬೈಪಾಸ್ ರಸ್ತೆಯ ಲಕ್ಷ್ಮೀ ಗುಡಿ ಬಳಿಯ ಆಲದ ಮರ, ಎಸ್.ಎಸ್.ಎನ್.ಕಾಲೇಜು ಆವರಣದಲ್ಲಿನ ಆಲದ ಮರ, ಬೈಪಾಸ್ ರಸ್ತೆಯ ಪಕ್ಕದ ಆಲದ ಮರಕ್ಕೆ ನೂರಾರು ಮಹಿಳೆಯರು ನೂಲು ಸುತ್ತಿ, ಪೂಜೆ ಸಲ್ಲಿಸಿ ಮಂಗಳವಾರ ವೃತ ಆಚರಿಸಿದರು.

ಹುಕ್ಕೇರಿ ಪಟ್ಟಣದ ಬೈಪಾಸ್ ಬಳಿಯ ಲಕ್ಷ್ಮೀ ಮಂದಿರದ ಆವರಣದಲ್ಲಿನ ಅರಳಿ ಮರಕ್ಕೆ ಮಹಿಳೆಯರು ನೂಲು ಸುತ್ತುವ ಮೂಲಕ ವಟ ಸಾವಿತ್ರಿ ವೃತ ಮಂಗಳವಾರ ಆಚರಿಸಿದರು.
ಹುಕ್ಕೇರಿ ಪಟ್ಟಣದಲ್ಲಿ ಮಹಿಳೆಯರು ಅರಳಿ ಮರಕ್ಕೆ ನೂಲು ಸುತ್ತುವ ಮೊದಲು ಐದು ಮಂದಿ ಮುತ್ತೈದೆಯರಿಗೆ ಮಂಗಳವಾರ ಉಡಿತುಂಬಿ ನಮಸ್ಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.