ADVERTISEMENT

ಬಿರಿಯಾನಿ ಜಾಹೀರಾತಿನಲ್ಲಿ ಸಾಧು–ಸಂತರಿಗೆ ಅವಮಾನ ಎಂದು ಬೆಳಗಾವಿಯಲ್ಲಿ ವಿವಾದ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 15:55 IST
Last Updated 12 ಆಗಸ್ಟ್ 2021, 15:55 IST
ವಿವಾದಿತ ಜಾಹೀರಾತು
ವಿವಾದಿತ ಜಾಹೀರಾತು   

ಬೆಳಗಾವಿ: ‘ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ, ನಗರದ ಹೋಟೆಲ್‌ವೊಂದರ ತಿನಿಸಿನ ಪೋಸ್ಟ್‌ನಲ್ಲಿ ಸಾಧು–ಸಂತರಿಗೆ ಅಪಮಾನ ಮಾಡಲಾಗಿದೆ. ಸಂಬಂಧಿಸಿದ ಹೋಟೆಲ್‌ನವರು 24 ಗಂಟೆಯೊಳಗೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ಮುಂದಾಗುವ ಅನಾಹುತಕ್ಕೆ ಹೋಟೆಲ್‌ನವರೆ ಹೊಣೆ ಆಗಬೇಕಾಗುತ್ತದೆ’ ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಕಾರ್ಯಕರ್ತರು ಎಚ್ಚರಿಕೆ ನೀಡಿದರು.

ಡಿಸಿಪಿ ಕಚೇರಿಗೆ ಗುರುವಾರ ಮನವಿ ಸಲ್ಲಿಸಿರುವ ಅವರು, ‘ಹೋಟೆಲ್‌ವೊಂದು ಬಿರಿಯಾನಿಯ ಜಾಹೀರಾತನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಸಾಧು-ಸಂತರನ್ನು ಅಪಮಾನಿಸಲಾಗಿದೆ. ಇದು ಸರಿಯಲ್ಲ’ ಎಂದು ತಿಳಿಸಿದರು.

ಹೋಟೆಲ್ ಬಳಿಯೇ ಆಕ್ಷೇಪ ವ್ಯಕ್ತಪಡಿಸಿದ ಕಾರ್ಯಕರ್ತರು ನಂತರ ಡಿಸಿಪಿ ಕಚೇರಿಗೆ ಬಂದು ಮನವಿ ಸಲ್ಲಿಸಿದರು.

ADVERTISEMENT

ಬಜರಂಗ ದಳದ ಬೆಳಗಾವಿ ವಿಭಾಗದ ಸಂಯೋಜಕ ಸದಾಶಿವ ಗುದಗಗೋಳ, ಜಿಲ್ಲಾ ಸಂಯೋಜಕ ಬಾವಕಣ್ಣ ಲೋಹಾರ, ಆದಿನಾಥ ಗಾವಡೆ, ವಿಎಚ್‌ಪಿ ಜಿಲ್ಲಾ ಘಟಕದ ಕಾರ್ಯದರ್ಶಿ ವಿಜಯ ಜಾಧವ ಮತ್ತು ಸುನಿಲ್ ಕನೇರಿ ಇದ್ದರು.

ಹೋಟೆಲ್ ಬಂದ್ ಮಾಡಲಾಗಿದೆ. ಹೋಟೆಲ್ ಮಾಲೀಕರ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹೋಟೆಲ್ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.