ADVERTISEMENT

ಚಿಕ್ಕೋಡಿ: ವಿರಾಟ ಹಿಂದೂ ಸಮ್ಮೇಳನ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 6:27 IST
Last Updated 3 ಫೆಬ್ರುವರಿ 2026, 6:27 IST
ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಮ್ಮಿಕೊಂಡ ವಿರಾಟ ಹಿಂದೂ ಸಮ್ಮೇಳನದಲ್ಲಿ ಸೇರಿದ ಅಪಾರ ಜನಸ್ತೋಮ
ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಮ್ಮಿಕೊಂಡ ವಿರಾಟ ಹಿಂದೂ ಸಮ್ಮೇಳನದಲ್ಲಿ ಸೇರಿದ ಅಪಾರ ಜನಸ್ತೋಮ   

ಚಿಕ್ಕೋಡಿ: ಮಾತೃಶಕ್ತಿಯಿಂದ ಬೆಳೆದ ಭಾರತ ದೇಶಕ್ಕೆ ನಾವು ಭಾರತಮಾತೆ ಎಂದು ಗೌರವಿಸುತ್ತೇವೆ. ಅಂತಹ ಭಾರತೀಯ ಸಂಸ್ಕೃತಿಯನ್ನು, ಉಳಿಸಿ ಬೆಳೆಸಿ ದೇಶದ ಗೌರವವನ್ನು ಕಾಪಾಡಿಕೊಂಡು ಹೋಗುವುದು ಮತ್ತು ರಾಷ್ಟ್ರ ರಕ್ಷಿಸವುದು ನಮ್ಮೆಲ್ಲರ ಆದ್ಯಕರ್ತವ್ಯವಾಗಿದೆ" ಎಂದು ಆತ್ಮನಿರ್ಭರ ಭಾರತ ಜಿಲ್ಲಾ ವಕ್ತಾರ ನಂದು ಗಾಯಕವಾಡ ಹೇಳಿದರು.

ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ವಿರಾಟ ಹಿಂದೂ ಸಮ್ಮೇಳನ ಉದ್ದೇಶಿಸಿ ಮಾತನಾಡಿ, ಹಿಂದೂ ಧರ್ಮ ರಕ್ಷಣೆ ಪ್ರತಿಯೊಬ್ಬ ಹಿಂದೂವಿನ ಜವಾಬ್ದಾರಿಯಾಗಿದೆ ಎಂದರು.

ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ‘ಭಾರತೀಯ ಸಂಸ್ಕ್ರತಿ ವಿಶ್ವಕ್ಕೆ ಮಾದರಿಯಾಗಿದ್ದು, ಈ ಸಂಸ್ಕ್ರತಿಯ ರಕ್ಷಣೆ ನಮ್ಮ ತಾಯಂದಿರಿಂದ ಆಗುತ್ತಿದೆ. ಆರ್‌ಎಸ್‌ಎಸ್ ಕಟ್ಟಿ ಬೆಳೆಸಿದ ಹಿಂದೂ ರಾಷ್ಟ್ರ ಭಾರತವನ್ನು ಒಳಗಿನಿಂದ ಮತ್ತು ಹೊರಗಿನಿಂದ ರಕ್ಷಿಸುವ ಕಾರ್ಯವಾಗಬೇಕಾಗಿದೆ. ಸಂಘದ ಶತಮಾನೋತ್ಸವ ಸಂದರ್ಭದಲ್ಲಿ ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಕುಟುಂಬ ಪ್ರಭೋದನೆ, ಸ್ವದೇಶಿ ಜೀವನಶೈಲಿ, ನಾಗರೀಕ ಶಿಷ್ಟಾಚಾರ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ADVERTISEMENT

ವಿಶ್ವ ಹಿಂದೂ ಪರಿಷತ್ ಗೋಕಾಕ ಪ್ರಾಂತ ಸತ್ಸಂಗ ಪ್ರಮುಖ ನಾರಾಯಣ ಮಠಾಧಿಕಾರಿ, ಸಾಮಾಜಿಕ‌ ಕಾರ್ಯಕರ್ತೆ ನೀಲಮ್ ಅಡಕೆ ಮಾತನಾಡಿದರು.

ಮಂಗಸೂಳಿ ಗಿರಿ ಆಶ್ರಮದ ರಾಜಯೋಗಿ ನಾಗಲಿಂಗ ಸ್ವಾಮೀಜಿ, ಹುಕ್ಕೇರಿ ಕ್ಯಾರಗುಡ್ಡಮಠದ ಅಭಿನವ ಮಂಜುನಾಥ ಸ್ವಾಮೀಜಿ, ನಿಪ್ಪಾಣಿ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ ಸಾನ್ನಿದ್ಯದಲ್ಲಿ ನಡೆದ
ಸಮ್ಮೇಳನದಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ದುಂಡಪ್ಪ ಬೆಂಡವಾಡೆ, ಸಂಜೀವ ಪಾಟೀಲ, ಮಹೇಶ ಬಾಕಳೆ, ಭಾಲಚಂದ್ರ ಬಾಕಳೆ, ಸುನೀಲ ಕಾಮತ, ದಿಲೀಪ‌ ದೇಸಾಯಿ, ವಿನೋದ ಶಹಾ, ಕುಮಾರ ಕುಂಬಾರ, ಉತ್ತಮ ಕಾಟಕರ, ಶಿವರಾಜ ಜೊಲ್ಲೆ, ಪಂಚಾಕ್ಷರಿ ಮಠಪತಿ, ಜ್ಯೋತಿಪ್ರಸಾದ ಜೊಲ್ಲೆ, ಪುಂಡಲೀಕ‌ ಬುಬನಾಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.