ADVERTISEMENT

ಬೆಳಗಾವಿ ಮಹಾನಗರ ಪಾಲಿಕೆ: ಪುತ್ರಿಯರೊಂದಿಗೆ ಮತ ಚಲಾಯಿಸಿದ ಮಂಗಲಾ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 13:16 IST
Last Updated 3 ಸೆಪ್ಟೆಂಬರ್ 2021, 13:16 IST
ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಸಂಸದೆ ಮಂಗಲಾ ಅಂಗಡಿ ಅವರು ವಾರ್ಡ್ ನಂ.17ರ ಸದಾಶಿವ ನಗರದಲ್ಲಿ ಡಾ.ಸ್ಫೂರ್ತಿ ಪಾಟೀಲ ಮತ್ತು ಶ್ರದ್ಧಾ ಶೆಟ್ಟರ್ ಅವರೊಂದಿಗೆ ಮತ ಚಲಾಯಿಸಿದರು
ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಸಂಸದೆ ಮಂಗಲಾ ಅಂಗಡಿ ಅವರು ವಾರ್ಡ್ ನಂ.17ರ ಸದಾಶಿವ ನಗರದಲ್ಲಿ ಡಾ.ಸ್ಫೂರ್ತಿ ಪಾಟೀಲ ಮತ್ತು ಶ್ರದ್ಧಾ ಶೆಟ್ಟರ್ ಅವರೊಂದಿಗೆ ಮತ ಚಲಾಯಿಸಿದರು   

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸಂಸದೆ ಮಂಗಲಾ ಸುರೇಶ ಅಂಗಡಿ ಪುತ್ರಿಯರ ಜೊತೆ ಬಂದು ಮತದಾನ ಮಾಡಿದರು.

ವಾರ್ಡ್ ನಂ.17ರ ಸದಾಶಿವ ನಗರದ ಮತಗಟ್ಟೆ ಕೇಂದ್ರ 110ರಲ್ಲಿ ಪುತ್ರಿಯರಾದ ಶ್ರದ್ಧಾ ಶೆಟ್ಟರ್ ಮತ್ತು ಸ್ಫೂರ್ತಿ ಪಾಟೀಲ ಜೊತೆ ಬಂದು ಹಕ್ಕು ಚಲಾಯಿಸಿದರು.

ನಂತರ ಮಾತನಾಡಿದ ಸಂಸದೆ, ‘ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿರುವ ಅಭಿವೃದ್ಧಿ ಯೋಜನೆಗಳನ್ನು ನೋಡಿ ಜನ ಬೆಂಬಲ ನೀಡಿದ್ದಾರೆ. ಮಹಾನಗರ ಪಾಲಿಕೆ ಮೇಲೆ ಈ ಬಾರಿ ಬಿಜೆಪಿ ಧ್ವಜ ಹಾರಲಿದೆ. 45ಕ್ಕೂ ಹೆಚ್ಚು ಸ್ಥಾನಗಳನ್ನು ನಮ್ಮ ಪಕ್ಷ ಗೆಲ್ಲಲಿದೆ’ ಎಂದರು.

ADVERTISEMENT

‘ಕೊರೊನಾದಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.