ADVERTISEMENT

ನಾಡು–ನುಡಿ: ಅಭಿಮಾನ ಹೆಚ್ಚಲಿ- ಈರಯ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 14:22 IST
Last Updated 9 ಜುಲೈ 2021, 14:22 IST
ತಲ್ಲೂರ ಸಮೀಪದ ಆಲದಕಟ್ಟಿ ಕೆ.ಎಂ. ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ಸೇನೆ ಗ್ರಾಮ ಘಟಕದ ಉದ್ಘಾಟನೆ ಕಾರ್ಯಕ್ರಮ ನಡೆಯಿತು
ತಲ್ಲೂರ ಸಮೀಪದ ಆಲದಕಟ್ಟಿ ಕೆ.ಎಂ. ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ಸೇನೆ ಗ್ರಾಮ ಘಟಕದ ಉದ್ಘಾಟನೆ ಕಾರ್ಯಕ್ರಮ ನಡೆಯಿತು   

ತಲ್ಲೂರ (ಬೆಳಗಾವಿ ಜಿಲ್ಲೆ): ‘ಕನ್ನಡ ನಾಡು–ನುಡಿಯ ಬಗ್ಗೆ ಯುವ ಜನರು ಸೇರಿದಂತೆ ಎಲ್ಲರೂ ಅಭಿಮಾನವನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ಈರಯ್ಯ ಸ್ವಾಮೀಜಿ ಹೇಳಿದರು.

ಸಮೀಪದ ಆಲದಕಟ್ಟಿ ಕೆ.ಎಂ. ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ಸೇನೆ ಗ್ರಾಮ ಘಟಕ ಉದ್ಘಾಟಿಸಿ ಹಾಗೂ ಫಲಕ ಅನಾವರಣಗೊಳಿಸಿ ಅವರು ಮಾತನಾಡಿದರು.

‘ಕನ್ನಡವು ಬಾಂಧವ್ಯ ಬೆಸೆಯುವ ಭಾಷೆಯಾಗಿದೆ. ಇದನ್ನು ಬಳಸುವ ಮೂಲಕ ಬೆಳೆಸಬೇಕು. ಕನ್ನಡವನ್ನು ಶುದ್ಧವಾಗಿ ಬರೆಯಲು ಕಲಿತಾಗ ಮತ್ತು ಮಾತನಾಡಿದಾಗ ಕನ್ನಡಾಂಬೆಯ ಋಣ ತೀರಿಸಿದಂತಾಗುತ್ತದೆ’ ಎಂದರು.

ADVERTISEMENT

ಗ್ರಾಮ ಪಂಚಾಯ್ತಿ ಉಪಾದ್ಯಕ್ಷ ಪಕ್ಕೀರಪ್ಪ ಸನ್ನಗೌಡರ, ಸದಸ್ಯ ಸುರೇಶ ಮುಗಳಿ, ಕರ್ನಾಟಕ ರಕ್ಷಣಾ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಬಸನಾಯ್ಕ ಪಾಟೀಲ, ಉಪಾಧ್ಯಕ್ಷ ದ್ಯಾಮನಗೌಡ ಪಾಟೀಲ, ಕಾರ್ಮಿಕ ಘಟಕದ ಅಧ್ಯಕ್ಷ ಶ್ರೀನಿವಾಸ ಪಾಟೀಲ, ಗ್ರಾಮ ಘಟಕದ ಅಧ್ಯಕ್ಷ ಪ್ರಕಾಶ ಸತ್ಯನಾಯ್ಕರ, ಉಪಾಧ್ಯಕ್ಷ ಅಜ್ಜಪ್ಪ ಮಡಿವಾಳರ, ಅಜ್ಜಪ್ಪ ದಾಗನಾಯ್ಕರ, ವಿಠ್ಠಲ ಸತ್ಯನಾಯ್ಕರ, ಬಸವರಾಜ ಹಳೇಮನಿ, ಅಜ್ಜಪ್ಪ ಸತ್ಯನಾಯಕರ, ಮಹಾಂತೇಶ ಗೌಡರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.