ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಪಂ ವ್ಯಾಪ್ತಿಗೆ ಬರುವ ಆನಂದಪೂರ ಗ್ರಾಮದಲ್ಲಿ ಶನಿವಾರ ಶ್ರೀ ಬನಶಂಕರಿ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ದೇವಾಂಗ ಬನಶಂಕರಿ ಮಂಗಲ ಕಾರ್ಯಾಲಯವನ್ನು ಉದ್ಘಾಟಿಸಿ ಸತೀಶ ಜಾರಕಿಹೊಳಿ ನೇರವೇರಿಸಿದರು.
ಯಮಕನಮರಡಿ: ನೇಕಾರರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಸ್ಥಳೀಯವಾಗಿ ನಿಮ್ಮ ಸಮಾಜದ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಪಂ ವ್ಯಾಪ್ತಿಗೆ ಬರುವ ಆನಂದಪೂರ ಗ್ರಾಮದಲ್ಲಿ ಶನಿವಾರ ಸತೀಶ ಜಾರಕಿಹೊಳಿ ನೇಕಾರ ಕಾಲೋನಿ, ಬನಶಂಕರಿ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ದೇವಾಂಗ ಬನಶಂಕರಿ ಮಂಗಲ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.
’ನಾನು ಜವಳಿ ಖಾತೆ ಸಚಿವನಾಗಿದ್ದ ವೇಳೆ ನೇಕಾರ ಸಮಾಜ ಬಾಂಧವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ವಿದ್ಯುತ್ ಬಿಲ್ ಕಡಿತಗೊಳಿಸಿದ್ದೆ. ನೇಕಾರ ಸಮಾಜ ಬಾಂಧವರ ಉದ್ದಾರಕ್ಕಾಗಿ ಈಗ ಸರ್ಕಾರದಿಂದ ಆನಂದಪುರಲ್ಲಿ ಎರಡು ಎಕರೆ ಭೂಮಿಯನ್ನು ಕಲ್ಪಿಸಿದ್ದು ರಾಜ್ಯದಲ್ಲಿ ಪ್ರಥಮವಾಗಿದೆ. ಬೆಳಗಾವಿಯಲ್ಲಿ ಕೂಡ ನೇಕಾರ ಸಮಸ್ಯೆಗಳು ಇದೆ ಅವುಗಳ ಸ್ಪಂದನೆ ಮಾಡಲಾಗುವುದು ಆದ್ದರಿಂದ ನೇಕಾರ ಸಮಾಜ ಬಾಂಧವರು ನೇಕಾರಿಕೆಯಲ್ಲಿ ಹೊಸ ಹೊಸ ವಿನ್ಯಾಸ ರೂಢಿಸಿಕೊಳ್ಳುವ ಮೂಲಕ ಕೈಮಗ್ಗ,ನೇಕಾರಿಕೆ ಉಳಿಸುವುದರೊಂದಿಗೆ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಹಂಪಿ ಹೇಮಕೂಟ ಮಹಾಸಂಸ್ಥಾನ ಗಾಯತ್ರಿ ಪೀಠದ ದಯಾನಂದಪುರಿ ಮಹಾಸ್ವಾಮೀಜಿ ಮಾತನಾಡಿ, ಸತೀಶ ಸತೀಶ ಜಾರಕಿಹೊಳಿ ಅವರು ನುಡಿದಂತೆ ನಡೆಯುತ್ತಿದ್ದು, ದೇವಾಂಗ ಸಮಾಜದ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಇಂತಹ ನಾಯಕರು ಇನ್ನಷ್ಟು ಉನ್ನತ ಸ್ಥಾನಕ್ಕೇರಬೇಕೆಂದು ಹರಿಸಿದರು.
ಹತ್ತರಗಿ ಕಾರಿಮಠದ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಮುಖಂಡರಾದ ರಾಹುಲ ಜಾರಕಿಹೊಳಿ, ಪರಶುರಾಮ ಧಗೆ, ಸಂತೋಷ ಅತ್ತೀಮರದ, ರವೀಂದ್ರ ಜಿಂಡ್ರಾಳಿ, ಅರುಣ ಅತ್ತಿಮರದ, ಚಂದ್ರಕಾಂತ ಕಾಪಸಿ, ಅರುಣ ಘಟಪಣದಿ, ಸಂಕಪ್ಪಾ ಮುಗಳಿ,ವಿನಾಯಕ ಶಡಿಚ್ಯಾಳಿ, ಗಿರೀಶ ಬಾವನ್ನವರ, ಅಭಿಜೀತ ಬಾವನ್ನವರ, ಶ್ರೀಮತಿ ಲೀಲಾ ತತವೀರಿ, ಆರ್ಚನಾ ಬಕರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.