ADVERTISEMENT

₹ 30 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ: ಸಚಿವ ಸುರೇಶ ಅಂಗಡಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 14:20 IST
Last Updated 8 ಅಕ್ಟೋಬರ್ 2019, 14:20 IST
ಬೆಳಗಾವಿಯ ಅಶೋಕ ವೃತ್ತದಿಂದ ಗೋಗಟೆ ವೃತ್ತದವರೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ‘ವೈಟ್‌ ಟಾಪಿಂಗ್‌’ (ರಸ್ತೆ ಅಭಿವೃದ್ಧಿ) ಕಾಮಗಾರಿಗೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಸೋಮವಾರ ಚಾಲನೆ ನೀಡಿದರು
ಬೆಳಗಾವಿಯ ಅಶೋಕ ವೃತ್ತದಿಂದ ಗೋಗಟೆ ವೃತ್ತದವರೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ‘ವೈಟ್‌ ಟಾಪಿಂಗ್‌’ (ರಸ್ತೆ ಅಭಿವೃದ್ಧಿ) ಕಾಮಗಾರಿಗೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಸೋಮವಾರ ಚಾಲನೆ ನೀಡಿದರು   

ಬೆಳಗಾವಿ: ಇಲ್ಲಿನ ಅಶೋಕ ವೃತ್ತದಿಂದ ಗೋಗಟೆ ವೃತ್ತದವರೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ‘ವೈಟ್‌ ಟಾಪಿಂಗ್‌’ (ರಸ್ತೆ ಅಭಿವೃದ್ಧಿ) ಕಾಮಗಾರಿಗೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಸೋಮವಾರ ಚಾಲನೆ ನೀಡಿದರು.

‘₹ 38 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಕೋಟೆ ಕೆರೆ ಸಮೀಪದ ಅಶೋಕ ವೃತ್ತದಿಂದ ಪ್ರಾರಂಭವಾಗಿ ಸಂಗೊಳ್ಳಿರಾಯಣ್ಣ ವೃತ್ತ, ರಾಣಿ ಚನ್ನಮ್ಮ ವೃತ್ತ, ಧರ್ಮವಿರ ಸಂಭಾಜಿ ವೃತ್ತದ ಮೂಲಕ ಗೋಗಟೆ ವೃತ್ತದವರೆಗೆ ನಡೆಯಲಿದೆ. ಅಕ್ಕಪಕ್ಕದಲ್ಲಿ ಬೈಸಿಕಲ್ ಪಥ, ಪಾದಚಾರಿ ರಸ್ತೆ ಇರಲಿದೆ’ ಎಂದು ಮಾಹಿತಿ ನೀಡಿದರು.

ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ, ಮುಖಂಡ ರಾಜು ಚಿಕ್ಕನಗೌಡರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.