
ಬೆಳಗಾವಿ: ‘ನಗರದಲ್ಲಿ ಆರಂಭಗೊಂಡ ಜಂಬಗಿ ನೇತ್ರ ಆಸ್ಪತ್ರೆಯ ಮೂಲಕ ಅಂತರರಾಷ್ಟ್ರೀಯ ಮಟ್ಟದ ಚಿಕಿತ್ಸೆ ದೊರೆಯುವಂತಾಗಿದೆ. ಇಲ್ಲಿನ ನುರಿತ ತಜ್ಞ ವೈದ್ಯರಿಂದ ಜನರಿಗೆ ಅನುಕೂಲವಾಗಲಿದೆ’ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.
ಎಸ್.ಎಸ್. ಜಂಬಗಿ ಸ್ಮರಣಾರ್ಥ ಶಿಕ್ಷಣ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ತೆರೆದ ‘ಜಂಬಗಿ ಸೂಪರ್‌ಸ್ಪೆಷಾಲಿಟಿ ಐ ಇನ್‌ಸ್ಟಿಟ್ಯೂಟ್’ ಅನ್ನು ನಗರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
‘ಬೆಂಗಳೂರು, ಮುಂಬೈ, ದೆಹಲಿಯಿಂಥ ನಗರಗಳಲ್ಲಿ ಮಾತ್ರ ಸಿಗುತ್ತಿದ್ದ ಚಿಕಿತ್ಸೆ ಈಗ ಬೆಳಗಾವಿಯಲ್ಲೂ ಸಿಗುತ್ತಿದೆ’ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ, ‘40 ವರ್ಷದ ಹಿಂದಿದ್ದ ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳನ್ನು ಕಂಡಿದ್ದು, ವಿಶ್ವಾಸಾರ್ಹ ಆಸ್ಪತ್ರೆಗಳು ಇಲ್ಲಿವೆ. ಭವ್ಯವಾದ ಆಸ್ಪತ್ರೆಯನ್ನು ನಿರ್ಮಿಸಿರುವ ಜಂಬಗಿ ಅವರ ಕಾರ್ಯವನ್ನು ಶ್ಲಾಘನೀಯ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ವಿದೇಶಿ ಉಪಕರಣಗಳ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದಾಗಿರುವುದು ಸಂತಸ ವಿಷಯ’ ಎಂದರು.
ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ.ಅಮೋಘ್ ಎಲ್. ಜಂಬಗಿ ಮಾತನಾಡಿದರು. ಡಾ.ಜಗದೀಶ್ ಬಿ. ಪಾಟೀಲ, ವಿಟ್ರಿಯೊರೆಟಿನಲ್ ಸರ್ಜನ್ ಡಾ.ಹೇಮಂತ್ ಆರ್., ಗ್ಲುಕೋಮಾ ತಜ್ಞೆ ಡಾ.ಸ್ನೇಹಾ ಎ. ಭಾಂದುರ್ಗೆ ಹಾಗೂ ಪಿಡಿಯಾಟ್ರಿಕ್ ನೇತ್ರತಜ್ಞರಾದ ಡಾ.ಮಿತಾಲಿ ಶಾಹ ಹಲವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.