ADVERTISEMENT

ಉಗರಗೋಳ: ಯಲ್ಲಮ್ಮನ ಗುಡ್ಡದಲ್ಲಿ ₹76.60 ಲಕ್ಷ ಮೌಲ್ಯದ ಕಾಣಿಕೆ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 5:17 IST
Last Updated 15 ಆಗಸ್ಟ್ 2025, 5:17 IST
ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾಣದಲ್ಲಿ ಗುರುವಾರ ಹುಂಡಿ ಎಣಿಕೆ ನಡೆಯಿತು
ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾಣದಲ್ಲಿ ಗುರುವಾರ ಹುಂಡಿ ಎಣಿಕೆ ನಡೆಯಿತು   

ಪ್ರಜಾವಾಣಿ ವಾರ್ತೆ

ಉಗರಗೋಳ: ಇಲ್ಲಿನ ಯಲ್ಲಮ್ಮನ ಗುಡ್ಡದಲ್ಲಿ ಗುರುವಾರ ಜುಲೈ 1ರಿಂದ ಆಗಸ್ಟ್‌ 10ರ ಅಧಿಯ ಹುಂಡಿ ಎಣಿಕೆ ಮಾಡಲಾಯಿತು. ಈ ಅವಧಿಯಲ್ಲಿ ₹67 ಲಕ್ಷ ನಗದು, ₹5.84 ಲಕ್ಷ ಮೌಲ್ಯದ ಬಂಗಾರ ಆಭರಣ, ₹1.15 ಲಕ್ಷ ಬೆಳ್ಳಿ ಸಾಮಗ್ರಿ ಸೇರಿದಂತೆ ₹76.60 ಲಕ್ಷಕ್ಕೂ ಹೆಚ್ಚು ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ.

‘ಮಳೆಯಿಂದಾಗಿ ದೇವಸ್ಥಾನ ಬಂದ್ ಆಗಿದೆ ಎಂಬುದು ಸುಳ್ಳು. ಎಂದಿನಂತೆ ಧಾರ್ಮಿಕ ಆಚರಣೆ ನಡೆಯುತ್ತವೆ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆಯಬಹುದು’ ಎಂದು ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ ತಿಳಿಸಿದ್ದಾರೆ.

ADVERTISEMENT

ಉಪಕಾರ್ಯದರ್ಶಿ ನಾಗರತ್ನ ಚೋಳಿನ, ಬೆಳಗಾವಿ ಧಾರ್ಮಿಧತ್ತಿ ಇಲಾಖೆ ರೇಣುಕಾ ಶಿಂತ್ರಿ, ಸಿವಾನಂದ ನೇಸರಗಿ, ಅಲ್ಲಮಪ್ರಭು ಪ್ರಭುನವರ, ಎನ್.ಎಂ. ಮುದಗೌಡ್ರ, ಆರ್.ಎಚ್. ಸವದತ್ತಿ, ಪ್ರಭು ಹಂಜಗಿ, ಎಎಸ್‍ಐಡಿಅರ್ ಸಣ್ಣಮಾಳಗೆ, ಆನಂದ ಗೋರವನಕೋಳ್ಳ ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.