ADVERTISEMENT

ಆಯುಷ್: ಎರಡನೇ ಸುತ್ತಿನ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 19:20 IST
Last Updated 25 ಅಕ್ಟೋಬರ್ 2017, 19:20 IST

ಬೆಂಗಳೂರು: ಆಯುಷ್ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿಗಾಗಿ ಎರಡನೇ ಸುತ್ತಿನ ಸೀಟು ಹಂಚಿಕೆ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಲಾಗಿದೆ.

ಮೂಲ ದಾಖಲೆಗಳನ್ನು ಗುರುವಾರ ಮಧ್ಯಾಹ್ನ 3ರೊಳಗೆ ಸಲ್ಲಿಸಬೇಕು. ಆಯ್ಕೆ ದಾಖಲು ಪರಿಷ್ಕರಿಸಲು ಅಂದು ಸಂಜೆ 6ರಿಂದ ಇದೇ 28ರ ಸಂಜೆ 4ರವರೆಗೆ ಅವಕಾಶ ಇದೆ. ಆ ದಿನ ರಾತ್ರಿ 9ಕ್ಕೆ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ.

ಸೀಟು ಪಡೆದ ವಿದ್ಯಾರ್ಥಿಗಳು ಇದೇ 30ರಂದು ಶುಲ್ಕ ಪಾವತಿಸಬೇಕು. ಅ.31ರಂದು ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕು. ವಿವರಗಳಿಗೆ ವೆಬ್‌ಸೈಟ್ (http://kea.kar.nic.in) ವೀಕ್ಷಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.