ಬೆಂಗಳೂರು: `ಆಯುರ್ವೇದವೆಂಬುದು ಸಾಮಾನ್ಯ ಜನರ ನಾಡಿಮಿಡಿತವಿದ್ದಂತೆ. ಪಾಶ್ಚಿಮಾತ್ಯ ಔಷಧ ಪದ್ದತಿಯ ನಡುವೆ ಆಯುರ್ವೇದದ ಬಗೆಗಿನ ಕಾಳಜಿ ಸೊರಗುತ್ತಿದೆ' ಎಂದು ಕಾಲಭೈರವೇಶ್ವರ ಆಯುರ್ವೇದ ವೈದ್ಯಕೀಯ ಕಾಲೇಜಿನ  ಡಾ. ಆಂಜನೇಯ ಮೂರ್ತಿ ತಿಳಿಸಿದರು.
 
 ವೈದ್ಯರತ್ನಂ ಔಷಧ ಶಾಲಾ ಸಂಸ್ಥೆಯು ನಗರದಲ್ಲಿ ಈಚೆಗೆ ಆಯೋಜಿಸಿದ್ದ ಆಯುರ್ವೇದ ತಜ್ಞರ ಸಮ್ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಆಯುರ್ವೇದವೆಂಬುದು ಕೇವಲ ಗಿಡಮೂಲಿಕೆಯ ಅಂಶ ಮಾತ್ರವಲ್ಲ. ಅಛ್ಠ ಕೂಡ ಜನರಿಗೆ ಅಗತ್ಯವಿರುವ ಆರೋಗ್ಯವನ್ನು ವೈಜ್ಞಾನಿಕ ರೀತಿಯಲ್ಲಿ ನೀಡುವುದೇ ಆಗಿದೆ. ಆದರೆ ಈಚಿನ ದಿನಗಳಲ್ಲಿ ನಕಲಿ ಆಯುರ್ವೇದ ವೈದ್ಯರ ಸಂಖ್ಯೆ ಹೆಚ್ಚುತ್ತಿರುವುದು ಆತಂಕ ತಂದಿದೆ' ಎಂದು ತಿಳಿಸಿದರು.
`ಆಯುರ್ವೇದ, ಯೋಗ ಹಾಗೂ ಉತ್ತಮ ಜೀವನ ಶೈಲಿಯಿಂದ ಇಂದಿನ ಒತ್ತಡ ಬದುಕಿಗೆ ಪರಿಹಾರ ಕಂಡುಕೊಳ್ಳಬಹುದು. ಇದರೊಂದಿಗೆ ಆಯುರ್ವೇದ ವೈದ್ಯರು ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಕೈಗೊಳ್ಳಬೇಕು' ಎಂದು ಅವರು ಸಲಹೆ ನೀಡಿದರು.
 
 ಡಾ.ಎ.ಆಶಾಲತಾ, `ವೈದ್ಯರಿಗೆ ತಾವು ನಿರ್ವಹಿಸುವ ಉತ್ತಮ ಕಾರ್ಯದಿಂದಾಗಿ ಗೌರವ ದೊರೆಯುತ್ತದೆ. ವೃತ್ತಿಯಲ್ಲಿ ಮುಂದುವರಿಯಬೇಕಾದರೆ ವೈದ್ಯರು ಆಧುನಿಕ ಪದ್ದತಿಯೊಂದಿಗೆ ರಾಜಿಯಾಗುತ್ತಲೇ ಆಯುರ್ವೇದ ಪರಂಪರೆಯನ್ನು ಬಲಪಡಿಸುವ ಅಗತ್ಯ ಎದ್ದುಕಾಣುತ್ತಿದೆ' ಎಂದರು. ವೈದ್ಯೆ ಡಾ.ಎಂ.ಆಶಾಲತಾ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.