ADVERTISEMENT

ನೇಪಾಳದಲ್ಲಿ ಬಾಲ್ಯವಿವಾಹ ಹೆಚ್ಚು

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 20:00 IST
Last Updated 7 ಜೂನ್ 2019, 20:00 IST

ಕಠ್ಮಂಡು (ಪಿಟಿಐ): ಬಾಲ್ಯವಿವಾಹ ಹೆಚ್ಚಾಗಿರುವಜಗತ್ತಿನಮೊದಲ10 ರಾಷ್ಟ್ರಗಳ ಪಟ್ಟಿಯಲ್ಲಿ ನೇಪಾಳ ಸೇರಿದೆ. ನೇಪಾಳದಲ್ಲಿ ಹುಡುಗರ ಬಾಲ್ಯ ವಿವಾಹ ಹೆಚ್ಚಾಗಿ ಕಂಡು ಬಂದಿದೆ ಎಂದು ಯುನಿಸೆಫ್‌(ವಿಶ್ವ ಸಂಸ್ಥೆಯ ಮಕ್ಕಳ ನಿಧಿ) ಬಾಲ್ಯ ವಿವಾಹ ಕುರಿತು ನಡೆಸಿದಅಧ್ಯಯನದಲ್ಲಿ ವಿವರಿಸಿದೆ.

ನೇಪಾಳದಲ್ಲಿ ಪ್ರತೀ 10 ಪುರುಷರ ಪೈಕಿ ಒಬ್ಬರುಬಾಲ್ಯವಿವಾಹಕ್ಕೆಒಳಗಾಗಿದ್ದಾರೆಎಂದು ಈ ವರದಿ ಹೇಳಿದೆ. 82 ರಾಷ್ಟ್ರಗಳಮಾಹಿತಿಯನ್ನು ಆಧರಿಸಿ ನಡೆಸಿದ ಈ ಅಧ್ಯಯನದಲ್ಲಿ,ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಹುಡುಗರ ಬಾಲ್ಯ ವಿವಾಹ ಹೆಚ್ಚಾಗಿದೆ ಎಂದು ಉಲ್ಲೇಖಿಸಲಾಗಿದೆ. ಸಹರಾ ಉಪಖಂಡ ಆಫ್ರಿಕಾ, ಲ್ಯಾಟಿನ್‌ ಅಮೆರಿಕ, ಕೆರಿಬಿಯನ್‌, ದಕ್ಷಿಣ ಏಷ್ಯಾ, ಮಧ್ಯ ಏಷ್ಯಾ ಮತ್ತು ಪೆಸಿಫಿಕ್‌ ಪ್ರದೇಶದಲ್ಲಿ ಹುಡುಗರ ಬಾಲ್ಯವಿವಾಹ ಪದ್ಧತಿ ಇದೆ.

’ಬಾಲ್ಯ ವಿವಾಹವು ಬಾಲ್ಯವನ್ನೇ ಕಸಿದುಕೊಳ್ಳುತ್ತದೆ.ಇನ್ನೂಪ್ರೌಢಾವಸ್ಥೆಗೆಬಾರದ ಮಕ್ಕಳೇ ದೊಡ್ಡವರ ಜವಾಬ್ದಾರಿಯನ್ನು ಬಹುಬೇಗನೇ ಹೊರಬೇಕಾಗುತ್ತದೆ’ ಎಂದು ಯುನಿಸೆಫ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಟ್ಟ ಫೋರ್‌ ಅಭಿಪ್ರಾಯಪಟ್ಟಿದ್ದಾರೆ. ‘ಬೇಗ ಮದುವೆಯಾಗುವ ಗಂಡುಮಕ್ಕಳು ಬೇಗನೇ ತಂದೆಯಾಗಿ ಬಿಡುತ್ತಾರೆ. ಅವರ ಶಿಕ್ಷಣ ಮೊಟಕುಗೊಂಡು ಉದ್ಯೋಗ ಅವಕಾಶ ಕುಂಠಿತವಾಗುವುದರಿಂದ ಅವರ ಮೇಲೆ ಒತ್ತಡ ಹೆಚ್ಚಾಗುತ್ತದೆ’ ಎಂದರು.

ADVERTISEMENT

ಹತ್ತನೇ ಸ್ಥಾನ ಪಡೆದಿರುವ ನೇಪಾಳವುಹುಡುಗರು ಮತ್ತು ಹುಡುಗಿಯರ ಬಾಲ್ಯ ವಿವಾಹ ಪದ್ಧತಿ ಹೊಂದಿರುವ ದಕ್ಷಿಣ ಏಷ್ಯಾದ ಏಕೈಕ ದೇಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.