ಬೆಂಗಳೂರು: ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮಹದೇವಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಕಗ್ಗದಾಸನಪುರದ ಅಬ್ಬಯ್ಯಲೇಔಟ್‌ನ ನಿವಾಸಿ ಮುನಿಚೌಡಪ್ಪ (48) ಬಂಧಿತ ಆರೋಪಿ. ಆತನು ತನ್ನ ಪತ್ನಿ ಗಂಗಲಕ್ಷ್ಮಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಮುನಿಚೌಡಪ್ಪನಿಗೆ ನಾಲ್ಕು ಮಂದಿ ಮಕ್ಕಳಿದ್ದಾರೆ. ಮೊದಲ ಪತ್ನಿ ಅಕಾಲಿಕ ಮರಣಕ್ಕೀಡಾದ ನಂತರ ಆತ ಗಂಗಲಕ್ಷ್ಮಿ ಅವರನ್ನು ವಿವಾಹವಾಗಿದ್ದ. ದಂಪತಿಗೆ ಮಗ ಸಹ ಇದ್ದಾನೆ. ಮಾ.8ರಂದು ಗಂಡ- ಹೆಂಡತಿ ಇಬ್ಬರೂ ಮಿತಿ ಮೀರಿ ಮದ್ಯಪಾನ ಮಾಡಿದ್ದ ವೇಳೆ ಹಣಕಾಸಿನ ವಿಷಯವಾಗಿ ಜಗಳವಾಗಿದೆ. ಇದು ವಿಕೋಪಕ್ಕೆ ಹೋದಾಗ ಆಕ್ರೋಶಗೊಂಡ ಮುನಿಚೌಡಪ್ಪ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ ್ದಪರಾರಿಯಾಗಿದ್ದ. ಕೊಲೆಯಾದ ಮೂರು ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿತ್ತು. ಹೊಸಕೋಟೆಯಲ್ಲಿದ್ದ ಅವನನ್ನು ಬಂಧಿಸಲಾಯಿತು ಎಂದು ಇನ್‌ಸ್ಪೆಕ್ಟರ್ ಮಹಮ್ಮದ್ ರಫಿ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.