ADVERTISEMENT

ಪಿ.ಯು ಕಾಲೇಜು ಸ್ಥಳಾಂತರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2016, 20:14 IST
Last Updated 16 ಆಗಸ್ಟ್ 2016, 20:14 IST
ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತರು ಮಂಗಳವಾರ   ದೊಮ್ಮಸಂದ್ರ ವೃತ್ತದಲ್ಲಿ ರಸ್ತೆ ತಡೆ  ನಡೆಸಿದರು.
ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತರು ಮಂಗಳವಾರ ದೊಮ್ಮಸಂದ್ರ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು.   

ಬೆಂಗಳೂರು: ಸರ್ಜಾಪುರ ರಸ್ತೆಯ ದೊಮ್ಮಸಂದ್ರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸ್ಥಳಾಂತರಕ್ಕೆ ಒತ್ತಾಯಿಸಿ ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟ ಕಾರ್ಯಕರ್ತರು ದೊಮ್ಮಸಂದ್ರ ವೃತ್ತದಲ್ಲಿ  ಮಂಗಳವಾರ ರಸ್ತೆ ತಡೆ  ನಡೆಸಿದರು.

ಸ್ಥಳೀಯ ಸರ್ಕಾರಿ ಶಾಲೆಯ ಕಟ್ಟಡದಲ್ಲಿ ಪಿ.ಯು. ತರಗತಿಗಳು ನಡೆಯುತ್ತಿವೆ. ಇಲ್ಲಿಯ ಹೌಸಿಂಗ್‌ ಬೋರ್ಡ್‌ ಕಾಲೋನಿಯಲ್ಲಿ  ಕಾಲೇಜಿಗೆ ಹೊಸ ಕಟ್ಟಡವನ್ನು ತ್ವರಿತವಾಗಿ ನಿರ್ಮಿಸಿ ಅಲ್ಲೇ ತರಗತಿಗಳನ್ನು ನಡೆಸಬೇಕು. 

ಕಾಲೇಜಿಗೆ ಡಾ.ಅಂಬೇಡ್ಕರ್‌ ಅವರ ಹೆಸರಿಡಬೇಕು ಎಂದು ಪ್ರತಿಭಟನಾಕಾರರು  ಒತ್ತಾಯಿಸಿದರು.
ಇದಕ್ಕೂ ಮುನ್ನ ಇಲ್ಲಿನ ಹಾಲಿನ ಡೇರಿಯಿಂದ ಪ್ರತಿಭಟನಾ ಜಾಥಾ ನಡೆಯಿತು.  ವಿವಿಧ ಸಂಘ ಸಂಸ್ಥೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತ ಪಡಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.