ADVERTISEMENT

ಮರಡೂರ್‌ಗೆ ‘ಕಲಾಶೃಂಗ’ ಗೌರವ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2018, 19:30 IST
Last Updated 15 ಏಪ್ರಿಲ್ 2018, 19:30 IST
ಶ್ರೀರಾಮ ಕಲಾ ವೇದಿಕೆ ಭಾನುವಾರ ನಗರದಲ್ಲಿ ಆಯೋಜಿಸಿದ್ದ ನಾದ ನಮನ ಕಾರ್ಯಕ್ರಮದಲ್ಲಿ ಸಾಹಿತಿ ಚಂದ್ರಶೇಖರ ಕಂಬಾರ ಅವರು ಹಿಂದುಸ್ತಾನಿ ಗಾಯಕ ಪಂ.ಸೋಮನಾಥ್ ಮರ್ಡೂರು ಅವರನ್ನು ‘ಕಲಾಸೃಂಗ’ ಪ್ರಶಸ್ತಿಯೊಂದಿಗೆ ಗೌರವಿಸಿದರು. ಚಿತ್ರದಲ್ಲಿ ತಬಲಾ ವಾದಕ ಉದಯರಾಜ ಕರ್ಪೂರ, ಸರೋದ್ ವಾದಕ ಪಂ.ರಾಜೀವ ತಾರಾನಾಥ್ ಹಾಗೂ ಸಂಸ್ಥೆಯ ರವೀಂದ್ರ ಯಾವಗಲ್ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ

ಬೆಂಗಳೂರು: ಹಿಂದೂಸ್ತಾನಿ ಗಾಯಕ ಸೋಮನಾಥ್‌ ಮರಡೂರ್‌ ಅವರಿಗೆ ಶ್ರೀರಾಮ ಕಲಾ ವೇದಿಕೆ ‘ಕಲಾಶೃಂಗ‘ ಪ್ರಶಸ್ತಿ ನೀಡಿ ಗೌರವಿಸಿದೆ.

ನಗರದಲ್ಲಿ ಭಾನುವಾರ ನಡೆದ ನಾದನಮನ ಕಾರ್ಯಕ್ರಮದಲ್ಲಿ ಪ್ರಖ್ಯಾತ ಸರೋದ್‌ ವಾದಕ ರಾಜೀವ್‌ ತಾರಾನಾಥ್ ಹಾಗೂ ಸಾಹಿತಿ ಚಂದ್ರಶೇಖರ ಕಂಬಾರ ಪ್ರಶಸ್ತಿ ಪ್ರದಾನ ಮಾಡಿದರು.

‘ರಾಜ್ಯೋತ್ಸವ’ ಗೌರವಕ್ಕೆ ಪಾತ್ರರಾಗಿರುವ ಸೋಮನಾಥ್‌ ಅವರು ಹಾವೇರಿ ಜಿಲ್ಲೆಯ ಮರಡೂರಿನವರು. ಪುಟ್ಟರಾಜು ಗವಾಯಿಗಳಿಂದ ಅವರು ಸಂಗೀತ ಅಭ್ಯಾಸ ಮಾಡಿದ್ದಾರೆ.

ADVERTISEMENT

‘ನಾನು ಕರ್ನಾಟಕ ಬಿಟ್ಟು ಮುಂಬೈನಲ್ಲಿ ವಾಸ ಮಾಡಲು ಬಯಸಿದ್ದೆ. ಆದರೆ, ಅಲ್ಲಿಯ ಹವಾಮಾನ ನನಗೆ ಒಗ್ಗಲಿಲ್ಲ. ಇದು ಒಳ್ಳೆಯದೇ ಆಯಿತು. ಈಗ ಧಾರವಾಡದಲ್ಲಿ ಅನೇಕ ಶಿಷ್ಯರನ್ನು ಬೆಳೆಸುತ್ತಿದ್ದೇನೆ’ ಎಂದು ಸೋಮನಾಥ್ ಹೇಳಿದರು. ‘ಸಂಗೀತ ವಿಶ್ವವಿದ್ಯಾಲಯಗಳು 100ಕ್ಕೆ ಇಂತಿಷ್ಟು ಅಂಕ ಕೊಡುತ್ತವೆ. ಇಂತಹ ಕಡೆ ಸಂಗೀತ ಕಲಿಕೆ ಹೇಗೆ ಸಾಧ್ಯ’ ಎಂದು ರಾಜೀವ್‌ ತಾರಾನಾಥ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.