ADVERTISEMENT

ವಿಮಾನನಿಲ್ದಾಣದ ದ್ವಾರಗಳ ಸಂಖ್ಯೆ ಮರುನಿಗದಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 19:52 IST
Last Updated 6 ಮಾರ್ಚ್ 2018, 19:52 IST
ವಿಮಾನನಿಲ್ದಾಣದ ದ್ವಾರಗಳ ಸಂಖ್ಯೆ ಮರುನಿಗದಿ
ವಿಮಾನನಿಲ್ದಾಣದ ದ್ವಾರಗಳ ಸಂಖ್ಯೆ ಮರುನಿಗದಿ   

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ದ್ವಾರಗಳ ಸಂಖ್ಯೆಯನ್ನು ಮರುನಿಗದಿಪಡಿಸಲಾಗಿದೆ.

ನೆಲಮಟ್ಟದ ಎಲ್ಲ 14 ನಿರ್ಗಮನ ದ್ವಾರಗಳ ಸಂಖ್ಯೆ ಹಿಂದೆ ಇಂಗ್ಲಿಷ್‌ ಅಕ್ಷರ ‘ಜಿ’ (ಜಿ1, ಜಿ2, ಜಿ3...) ಸೇರಿಸಲಾಗಿದೆ. ನೆಲ ಮಟ್ಟದಲ್ಲಿರುವ ಆಗಮನ ದ್ವಾರಗಳ ಸಂಖ್ಯೆ ಹಿಂದೆ ಇಂಗ್ಲಿಷ್‌ ಅಕ್ಷರ ‘ಎ’ ಸೇರಿಸಲಾಗಿದೆ.

ದೇಶದೊಳಗೆ ಸಂಚರಿಸುವ ವಿಮಾನಗಳಲ್ಲಿ ಪ್ರಯಾಣಿಸುವವರು ಬಳಸುವ ನಿರ್ಗಮನ ದ್ವಾರವು ಮೊದಲ ಮಹಡಿಯಲ್ಲಿದೆ. ಈ ದ್ವಾರಗಳಿಗೆ 13ರಿಂದ 24ರವರೆಗಿನ ಸಂಖ್ಯೆಗಳನ್ನು ನೀಡಲಾಗಿದೆ. ಇವುಗಳ ಹಿಂದೆ ಯಾವುದೇ ಅಕ್ಷರವನ್ನು ಸೇರಿಸಿಲ್ಲ.

ADVERTISEMENT

ಪ್ರಯಾಣಿಕರು ಗೊಂದಲಕ್ಕೆ ಒಳಗಾಗುವುದನ್ನು ತಪ್ಪಿಸಲು ಹಾಗೂ ಸುಲಲಿತ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.