ADVERTISEMENT

ಹೆಚ್ಚುವರಿ ಕೊಠಡಿ ನಿರ್ಮಾಣ: ಭರವಸೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 20:20 IST
Last Updated 19 ಸೆಪ್ಟೆಂಬರ್ 2013, 20:20 IST
ಮಳೆ ನೀರು ನುಗ್ಗಿ ಸಮಸ್ಯೆ ಎದುರಿಸುತ್ತಿರುವ ಕೃಷ್ಣರಾಜಪುರ ವಾರ್ಡ್ 26 ವ್ಯಾಪ್ತಿಯ ಸರ್ಕಾರಿ ಶಾಲೆಯ  ವಿದ್ಯಾರ್ಥಿಗಳ ಜೊತೆಗೆ ಶಾಸಕ ಬೈರತಿ ಎ ಬಸವರಾಜ್ ಮಾತನಾಡಿದರು. ಕ್ಷೇತ್ರ ಶಿಕ್ಷಣ ಅಧಿಕಾರಿ ನಂಜುಂಡಯ್ಯ, ನಗರ ಸಭೆಯ ಮಾಜಿ ಸದಸ್ಯ ಲೋಕೇಶ್ ಇದ್ದರು
ಮಳೆ ನೀರು ನುಗ್ಗಿ ಸಮಸ್ಯೆ ಎದುರಿಸುತ್ತಿರುವ ಕೃಷ್ಣರಾಜಪುರ ವಾರ್ಡ್ 26 ವ್ಯಾಪ್ತಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಜೊತೆಗೆ ಶಾಸಕ ಬೈರತಿ ಎ ಬಸವರಾಜ್ ಮಾತನಾಡಿದರು. ಕ್ಷೇತ್ರ ಶಿಕ್ಷಣ ಅಧಿಕಾರಿ ನಂಜುಂಡಯ್ಯ, ನಗರ ಸಭೆಯ ಮಾಜಿ ಸದಸ್ಯ ಲೋಕೇಶ್ ಇದ್ದರು   

ಕೃಷ್ಣರಾಜಪುರ: ಅಂಬೇಡ್ಕರ್ ಸರ್ಕಾರಿ ಶಾಲೆಯಲ್ಲಿ  ರೂ 35 ಲಕ್ಷ ವೆಚ್ಚದಲ್ಲಿ 5 ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದ್ದು, ಅವುಗಳನ್ನು  ಕಾಲಮಿತಿಯೊಳಗೆ ಪೂರ್ಣ ಗೊಳಿಸಲಾ­ಗುವುದು ಎಂದು ಶಾಸಕ ಬೈರತಿ ಎ.ಬಸವರಾಜ್‌ ಭರವಸೆ ನೀಡಿದರು.

ಮಳೆ ನೀರು ನುಗ್ಗಿ ಸಮಸ್ಯೆ ಎದುರಿಸುತ್ತಿರುವ ಕೃಷ್ಣರಾಜಪುರ ವಾರ್ಡ್ 26 ವ್ಯಾಪ್ತಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

ಭವಿಷ್ಯದಲ್ಲಿ ಅವ್ಯವಸ್ಥೆ ಎದುರಾಗದಂತೆ ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷರು ಎಚ್ಚರ ವಹಿಸಬೇಕು. ಸರ್ಕಾರಿ ಶಾಲೆಗೆ ಬಡ, ಮಧ್ಯಮ ವಗರ್ದವರ ಮಕ್ಕಳು ಹೆಚ್ಚು ಸಂಖ್ಯೆಯಲ್ಲಿರುವುದರಿಂದ ಅವರ ಹಿತ ಕಾಪಾಡಲು ಶಿಕ್ಷಕರು ಶ್ರಮಿಸಬೇಕು ಎಂದು ಅವರು ಸೂಚಿಸಿದರು.

ರಾಜ್ಯ ಗ್ರಾಮೀಣ ಅಭಿವೃದ್ಧಿ ಮಂಡಳಿ ಸಹಾಯಕ ನಿರ್ದೇಶಕ ಶಶಿಧರ ಮೊರಾಬಾದ್, ಬಿಬಿಎಂಪಿ ಜಂಟಿ ಆಯುಕ್ತ ದೇವರಾಜ್, ಮುಖ್ಯ ಎಂಜಿನಿಯರ್‌ ಮುನಿ ಕೃಷ್ಣಪ್,ಕ್ಷೇತ್ರ ಶಿಕ್ಷಣ ಅಧಿಕಾರಿ ನಂಜುಂಡಯ್ಯ ,ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.