ADVERTISEMENT

‘ತಂತ್ರಜ್ಞಾನದ ಬಗ್ಗೆ ವಿದ್ಯಾರ್ಥಿಗಳ ಆಸಕ್ತಿ ಅಗತ್ಯ’

​ಪ್ರಜಾವಾಣಿ ವಾರ್ತೆ
Published 29 ಮೇ 2014, 20:19 IST
Last Updated 29 ಮೇ 2014, 20:19 IST
ಪಿಇಎಸ್ ವಿಶ್ವವಿದ್ಯಾಲಯವು ಗುರುವಾರ ಆಯೋಜಿಸಿದ್ದ ‘ಪೈಸ್ಯಾಟ್‌ ಉಪಗ್ರಹ ನಿಯಂತ್ರಕ’ದ ಉದ್ಘಾಟನಾ ಸಮಾರಂಭದಲ್ಲಿ ಇಸ್ರೊ ಉಪಗ್ರಹ ಕೇಂದ್ರದ ನಿರ್ದೇಶಕ ಡಾ. ಎಸ್.ಕೆ.ಶಿವಕುಮಾರ್ ಕಾಲೇಜಿನ ಕೈಪಿಡಿಯನ್ನು ಬಿಡುಗಡೆ ಮಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಬಿ.ಎನ್‌.ಮೂರ್ತಿ, ಮುಖ್ಯ ಕಾರ್ಯನಿರ್ವಹ­ಣಾ­ಧಿ­ಕಾರಿ ಪ್ರೊ.ಡಿ.ಜವಾಹರ್‌ ಇತರರು ಇದ್ದಾರೆ 	–ಪ್ರಜಾವಾಣಿ ಚಿತ್ರ
ಪಿಇಎಸ್ ವಿಶ್ವವಿದ್ಯಾಲಯವು ಗುರುವಾರ ಆಯೋಜಿಸಿದ್ದ ‘ಪೈಸ್ಯಾಟ್‌ ಉಪಗ್ರಹ ನಿಯಂತ್ರಕ’ದ ಉದ್ಘಾಟನಾ ಸಮಾರಂಭದಲ್ಲಿ ಇಸ್ರೊ ಉಪಗ್ರಹ ಕೇಂದ್ರದ ನಿರ್ದೇಶಕ ಡಾ. ಎಸ್.ಕೆ.ಶಿವಕುಮಾರ್ ಕಾಲೇಜಿನ ಕೈಪಿಡಿಯನ್ನು ಬಿಡುಗಡೆ ಮಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಬಿ.ಎನ್‌.ಮೂರ್ತಿ, ಮುಖ್ಯ ಕಾರ್ಯನಿರ್ವಹ­ಣಾ­ಧಿ­ಕಾರಿ ಪ್ರೊ.ಡಿ.ಜವಾಹರ್‌ ಇತರರು ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮಾಹಿತಿ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರ­ಗಳ ಬಗ್ಗೆ  ವಿದ್ಯಾರ್ಥಿಗಳು  ಹೆಚ್ಚಿನ ಆಸಕ್ತಿ­ಯನ್ನು ಬೆಳೆಸಿಕೊಳ್ಳಬೇಕು’ ಎಂದು ಇಸ್ರೊ ಉಪಗ್ರಹ ಕೇಂದ್ರದ ನಿರ್ದೇಶಕ ಡಾ.ಎಸ್.ಕೆ.ಶಿವಕುಮಾರ್ ತಿಳಿಸಿದರು.

ಪಿಇಎಸ್ ವಿಶ್ವವಿದ್ಯಾಲಯವು ಗುರು­ವಾರ ನಗರದಲ್ಲಿ ಆಯೋಜಿಸಿದ್ದ ಕಾರ್ಯ­ಕ್ರಮದಲ್ಲಿ ‘ಪೈಸ್ಯಾಟ್‌ ಉಪ­ಗ್ರಹ ನಿಯಂತ್ರಕ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಉಪಗ್ರಹ ಸಾಧನದ ಮೂಲಕ ಮಹತ್ತ­ರದ ವಿಚಾರಗಳನ್ನು ವಿದ್ಯಾರ್ಥಿ­ಗಳಿಗೆ ಪ್ರಾಯೋಗಿಕವಾಗಿ ತಿಳಿಸಿಕೊಡ­ಬಹುದು. ಆಧುನಿಕ ತಂತ್ರಜ್ಞಾನದ ಜತೆ­ಯಲ್ಲಿ ಮೂಲ ವಿಜ್ಞಾನದೆಡೆಗೆ ಕುತೂ­ಹಲ­ವನ್ನು ಉಳಿಸಿಕೊಳ್ಳುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ಪ್ರಸ್ತುತ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರ­ದಲ್ಲಿ ಸಾಕಷ್ಟು ಸಂಶೋಧನಾ ಕಾರ್ಯ­ಗಳು ಜರುಗಬೇಕಿದೆ’ ಎಂದು ಹೇಳಿದರು. ಕಾಲೇಜಿನ ಮುಖ್ಯ­ಕಾರ್ಯ­ನಿರ್ವಹಣಾಧಿಕಾರಿ ಪ್ರೊ.ಡಿ.ಜವಾಹರ್‌ ಮಾತನಾಡಿದರು.

ಪೈಸ್ಯಾಟ್‌ ಉಪಗ್ರಹ ನಿಯಂತ್ರಕದ ಕಾರ್ಯವೇನು?
‘ವಿಶ್ವವಿದ್ಯಾಲಯದಲ್ಲಿರುವ ಸಂಶೋಧನಾ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ನ್ಯಾನೊ ತಂತ್ರಜ್ಞಾನದಲ್ಲಿ ಪೈಸ್ಯಾಟ್‌ ಉಪಗ್ರಹವನ್ನು ಸಿದ್ದಪಡಿಸಲಾಗಿದೆ’ ಎಂದು ಕಾಲೇಜಿನ ಸಂಶೋಧಕ ಪ್ರವೀಣ್‌ ಕುಮಾರ್‌ ತಿಳಿಸಿದರು.

‘ಸುಮಾರು 6 ರಿಂದ 7 ಕೆ.ಜಿ. ತೂಗುವ ಈ ಉಪಗ್ರಹವು ಬಾಹ್ಯಾಕಾಶದಲ್ಲಿ ನಡೆಯುವ ಹಲವು ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡುತ್ತದೆ. ನಿಯಂತ್ರಕದ ಮೂಲಕ ಅವುಗಳನ್ನು ಅರಿಯಲು ಸಾಧ್ಯವಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಬಾಹ್ಯಾಕಾಶ ತಂತ್ರಜ್ಞಾನದ ವಿವಿಧ ಅಪ್ಲಿಕೇಷನ್‌ಗಳ ಬಗ್ಗೆ  ಪ್ರಾಯೋಗಿಕ ಅರಿವು ಮೂಡಿಸಲು ಇದು ನೆರವಾಗುತ್ತದೆ. ಇದರ ಮೂಲ ಉದ್ದೇಶವೇ ಸಂಶೋಧನಾ ವಿದ್ಯಾರ್ಥಿಗಳಿಗೆ ನೆರವಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT